ETV Bharat / entertainment

'ಮ್ಯಾಕ್ಸ್' ಚಿತ್ರ ಒಪ್ಪಲು ಪ್ರಮುಖ ಕಾರಣ ತಿಳಿಸಿದ ಕಿಚ್ಚ ಸುದೀಪ್​

ಬಹುನಿರೀಕ್ಷಿತ 'ಮ್ಯಾಕ್ಸ್' ಚಿತ್ರದ ಬಗ್ಗೆ ನಾಯಕ ಕಿಚ್ಚ ಸುದೀಪ್, ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ನಿರ್ಮಾಪಕರಾದ ಕಲೈಪುಲಿ ಅವರು ಮಾತನಾಡಿದ್ದಾರೆ.

max movie
'ಮ್ಯಾಕ್ಸ್' ಚಿತ್ರತಂಡ (Max Team)
author img

By ETV Bharat Karnataka Team

Published : 3 hours ago

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಕೈಚಳಕದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್'. ಸದ್ಯ ಟೀಸರ್​ನಿಂದಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಕ್ರಿಸ್​​ಮಸ್ ದಿನದಂದು ರಿಲೀಸ್​ ಆಗಲಿದೆ.

ಮ್ಯಾಕ್ಸ್ ಚಿತ್ರ ಸೆಟ್ಟೇರಾಗಿನಿಂದಲೂ ಕಿಚ್ಚ ಸುದೀಪ್, ನಿರ್ದೇಶಕ ವಿಜಯ್ ಕಾರ್ತಿಕೇಯ, ನಿರ್ಮಾಪಕರಾದ ಕಲೈಪುಲಿ ಸೇರಿದಂತೆ ಚಿತ್ರ ತಂಡವು ಎಲ್ಲಿಯೂ ಮಾತನಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಖಾಸಗಿ ಹೋಟೆಲ್​ನಲ್ಲಿ ನಟ ಸುದೀಪ್, ನಿರ್ದೇಶಕ ವಿಜಯ್‍ ಕಾರ್ತಿಕೇಯ, ನಿರ್ಮಾಪಕ ಕಲೈಪುಲಿ, ಎಸ್.ಧಾನು, ಸುಧಾ ಬೆಳವಾಡಿ, ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್‍ ಚೆಂಡೂರು, ನಾಗರಾಜ್, ಅನಿರುದ್ದ್, ಪ್ರವೀಣ್, ಸಂಗೀತ ನಿರ್ದೇಶಕ ಅಜನೀಶ್‍ ಲೋಕನಾಥ್‍, ಛಾಯಾಗ್ರಾಹಕ ಶೇಖರ್ ಚಂದ್ರ, ಸಾಹಸ ನಿರ್ದೇಶಕ ಚೇತನ್‍ ಡಿ’ಸೋಜ, ಕಲಾ ನಿರ್ದೇಶಕ ಶಿವಕುಮಾರ್, ಸಂಕಲನಕಾರ ಗಣೇಶ್ ಬಾಬು, ಕಾರ್ಯಕಾರಿ ನಿರ್ಮಾಪಕ ಶ್ರೀರಾಮ್ ಮ್ಯಾಕ್ಸ್ ಚಿತ್ರದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು.

max movie
'ಮ್ಯಾಕ್ಸ್' ಚಿತ್ರತಂಡ (Max Team)

ಚಿತ್ರದ ಬಗ್ಗೆ ಸುದೀಪ್​ ಮಾತನಾಡಿ, ''ನಾನು ಈ ಸಿನಿಮಾ ಒಪ್ಪುವುದಕ್ಕೆ ಮೂಲ‌ ಕಾರಣ ನಿರ್ದೇಶಕ ವಿಜಯ್‍ ಕಾರ್ತಿಕೇಯ. ಅವರು ಬಂದು ಹೇಳಿದ ಕಥೆ ಚೆನ್ನಾಗಿರಲಿಲ್ಲವೆಂದರೆ ಯಾವುದೂ ಇಲ್ಲಿಯವರೆಗೂ ಬರುತ್ತಿರಲಿಲ್ಲ. ಧಾನು ಅವರು ಹಿರಿಯ ನಿರ್ಮಾಪಕರು. ಅವರು ಕಳಿಸಿಕೊಟ್ಟರು. ಕಥೆ ಚೆನ್ನಾಗಿರಲಿಲ್ಲ ಎಂದರೆ, ಬೇರೆ ಕಥೆ ಹುಡುಕುತ್ತಿದ್ದೆವೇನೋ. ಆದರೆ, ವಿಜಯ್‍ ಹೇಳಿದ ಕಥೆ ಬಹಳ ಇಷ್ಟವಾಯಿತು. ಚೆನ್ನೈನಿಂದ ಬಂದ ಅವರನ್ನು ಇಲ್ಲೇ ಉಳಿಸಿಕೊಂಡು, ಅವರ ಜೊತೆಗೆ ಕೂತು ಸಾಕಷ್ಟು ಚರ್ಚೆ ಮಾಡಿ, ಈ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿ ರೂಪಿಸಲಾಯಿತು'' ಎಂದರು.

''2004ರಲ್ಲಿ ಚೆನ್ನೈನಲ್ಲಿ 'ನಲ್ಲ' ಚಿತ್ರಕ್ಕೆ ಚಿತ್ರೀಕರಣ ಮಾಡುತ್ತಿದ್ದೆ. 'ಕಾಕ್ಕಾ ಕಾಕ್ಕಾ' ಎಂಬ ಚಿತ್ರ ಬಹಳ ಚೆನ್ನಾಗಿ ಓಡುತ್ತಿತ್ತು. ಆ ಚಿತ್ರವನ್ನು ಕನ್ನಡದಲ್ಲಿ ರೀಮೇಕ್‍ ಮಾಡುವ ಯೋಚನೆಯಿಂದ ಧಾನು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಹೋಗಿ ಭೇಟಿಯಾದೆ. ಮೊದಲ ದಿನ ಬಹಳ ಟೆನ್ಶನ್‍ನಲ್ಲಿದ್ದರು. 'ಕಾಕ್ಕಾ ಕಾಕ್ಕಾ' ಚಿತ್ರದ ಹಕ್ಕುಗಳನ್ನು ಕೊಡುವುದಕ್ಕೆ ಸಾಧ್ಯವೇ? ಎಂದೆ. 'ಆಸೆಪಟ್ಟು ಬಂದಿದ್ದೀರಾ. ನನಗೇನು ಬೇಡ' ಎಂದು ತಕ್ಷಣವೇ ಉಚಿತವಾಗಿ ಹಕ್ಕುಗಳನ್ನು ಬರೆದುಕೊಟ್ಟರು. ಅಂತಹ ಸಹೃದಯಿ ಹಿರಿಯ ನಿರ್ಮಾಪಕರ ಜೊತೆಗೆ ಸಿನಿಮಾ‌ ಮಾಡಿರುವುದು ಖುಷಿಯಾಗಿದೆ'' ಎಂದು ಸುದೀಪ್​ ನೆನೆದರು.

ಅಮ್ಮ ಚಿತ್ರ ನೋಡಬೇಕು ಅಂದಿದ್ದರು: ''ಮ್ಯಾಕ್ಸ್​ ಚಿತ್ರವನ್ನು ನೋಡಬೇಕು ಎಂದು ನಮ್ಮ ತಾಯಿ ಹೇಳಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲಿರುತ್ತದೆ. ಆಗಾಗ, ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಚಿತ್ರತಂಡದ ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ. ಎಲ್ಲರಿಗೂ ಪ್ರಮುಖ ಪಾತ್ರಗಳಿವೆ. ಎಲ್ಲರೂ ಬಹಳ ಚೆನ್ನಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ'' ಎಂದು ತಿಳಿಸಿದರು.

ನಿಷ್ಠಾವಂತ ಪೊಲೀಸ್‍ ಅಧಿಕಾರಿ ಪಾತ್ರ: ''ಇದು ಒಂದು ರಾತ್ರಿಯ ಕಥೆ. ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬಹಳ ಕಷ್ಟಪಟ್ಟಿದ್ದೇವೆ. ನಾನೊಬ್ಬನೇ ಅಲ್ಲ, ಎಲ್ಲರಿಗೂ ಕಷ್ಟವಾಗಿದೆ. ಬೆಂಕಿ, ಧೂಳಿನಲ್ಲಿ ನೈಟ್‍ ಎಫೆಕ್ಟ್ ಚಿತ್ರೀಕರಣ. ನನಗೆ ಚಿತ್ರದ ವೇಗ ಇಷ್ಟವಾಯಿತು. ಯಾವುದನ್ನೂ ಅನಗತ್ಯವಾಗಿ ತುರುಕಿಲ್ಲ. ಅಜನೀಶ್‍ ಸಹ ಚಿತ್ರ ನೋಡಿ ಚಿತ್ರ ವೇಗವಾಗಿದೆ ಎಂದರು. ಈ ಚಿತ್ರದಲ್ಲಿ ನಿಷ್ಠಾವಂತ ಪೊಲೀಸ್‍ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೇನೆ. ಅರ್ಜುನ್ ಮಹಾಕ್ಷಯ್‍ ನನ್ನ ಪಾತ್ರದ ಹೆಸರು. ಎಲ್ಲರೂ ಮ್ಯಾಕ್ಸ್ ಅಂತ ಕರೆಯುತ್ತಿರುತ್ತಾರೆ'' ಎಂದರು ಸುದೀಪ್​.

ನಿರ್ದೇಶಕ ವಿಜಯ್ ಕಾರ್ತಿಕೇಯ ಮಾತನಾಡಿ, ''ಈ ಚಿತ್ರವನ್ನು ನಿರ್ದೇಶಿಸಲು ಅವಕಾಶ ನೀಡಿದ ನಿರ್ಮಾಪಕ ಧಾನು ಅವರಿಗೆ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಧನ್ಯವಾದ. ಇದೊಂದು ಒಂದೇ ರಾತ್ರಿಯಲ್ಲಿ ನಡೆಯುವ ಎಮೋಷನಲ್ ಆಕ್ಷನ ಕಥಾಹಂದರ ಹೊಂದಿರುವ ಚಿತ್ರ. ಈ ಸಿನಿಮಾ ಎಲ್ಲಾ ವರ್ಗದವರಿಗೆ ಇಷ್ಟ ಆಗುತ್ತೆ'' ಅಂತಾ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಿಗ್ ಬಾಸ್​ ಮನೆ ತೊರೆದ ಶೋಭಾ ಶೆಟ್ಟಿ: ನಿಮ್ಮ ಅಭಿಪ್ರಾಯವೇನು?

ಕನ್ನಡದಲ್ಲಿ ಮೊದಲ ಚಿತ್ರ: ''ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ರಜನಿಕಾಂತ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಕನ್ನಡದಲ್ಲಿ 'ಮ್ಯಾಕ್ಸ್' ನನ್ನ ನಿರ್ಮಾಣದ ಮೊದಲ ಚಿತ್ರ. ಈ ಚಿತ್ರದ ಕುರಿತು ಸುದೀಪ್ ಅವರಿಗೆ ಫೊನ್ ಮಾಡಿ, ಒಂದೊಳ್ಳೆಯ ಕಥೆ ಇದೆ. ಅದನ್ನು ನೀವು‌ ಕೇಳಿ. ನಿಮಗೆ ಇಷ್ಟವಾದರೆ ಸಿ‌ನಿಮಾ‌ ಮಾಡೋಣ ಎಂದು ಹೇಳಿದೆ.‌ ಅವರಿಗೆ ಕಥೆ ಇಷ್ಟವಾಯಿತು. ಚಿತ್ರ ಆರಂಭವಾಯಿತು. ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟ ಸುದೀಪ್ ಅವರಿಗೆ ಧನ್ಯವಾದ. ಈ ಚಿತ್ರ ಸುದೀಪ್ ಇಷ್ಟ ಪಡುವವರಿಗೆ ಇಷ್ಟ ಆಗುತ್ತೆ'' ಎಂದು ನಿರ್ಮಾಪಕ ಕಲೈಪುಲಿ ಎಸ್.ಧಾನು ಹೇಳಿದರು.

ಈ ಚಿತ್ರದಲ್ಲಿ ಸುದೀಪ್ ಜೊತೆ ವರಲಕ್ಷ್ಮೀ ಶರತ್‌ಕುಮಾರ್, ತೆಲುಗು ನಟ ಸುನೀಲ್, ಶರತ್ ಲೋಹಿತಾಶ್ವ, 'ಕಾಲಕೇಯ' ಪ್ರಭಾಕರ್, ಪ್ರಮೊದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಕಲೈಪುಲಿ ಎಸ್ ತನು ವಿ ಕ್ರಿಯೇಷನ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬರೋಬ್ಬರಿ 50 ಕೋಟಿ ಬಜೆಟ್​​ನಲ್ಲಿ ಮ್ಯಾಕ್ಸ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುದೀಪ್ ಅಭಿನಯದ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ಬಹುನಿರೀಕ್ಷಿತ ಚಿತ್ರ ಇದೇ ಡಿಸೆಂಬರ್ 25ರಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮಾಡದ ತಪ್ಪಿಗೆ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ ಸುದೀಪ: ಮಾಣಿಕ್ಯನ ವ್ಯಕ್ತಿತ್ವದ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.