ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಕಾಂಗ್ರೆಸ್‌ನಲ್ಲೇ ಇರ್ತಾರೆ : ಶಾಸಕ ಬಯ್ಯಾಪುರ ಅಚಲ ವಿಶ್ವಾಸ - ಮಸ್ಕಿ ವಿಧಾನಸಭಾ ಉಪಚುನಾವಣೆ
🎬 Watch Now: Feature Video

ಕುಷ್ಟಗಿ (ಕೊಪ್ಪಳ) : ಕಾಂಗ್ರೆಸ್ ಮುಖಂಡ ಕೆ ವಿರೂಪಾಕ್ಷಪ್ಪ ನಮ್ಮೊಂದಿಗೆ ಕಾಂಗ್ರೆಸ್ನಲ್ಲಿ ಇರ್ತಾರೆ. ನಾಳೆ ಮಸ್ಕಿ ವಿಧಾನಸಭೆ ಉಪಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು. ಕುಷ್ಟಗಿಯಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಬಳಿಕ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ವಿರೂಪಾಕ್ಷಪ್ಪ ಅವರನ್ನು ಭೇಟಿಯಾಗಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಎಸ್ಟಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದು, ಅವರಿಗೆ ಕೋವಿಡ್ ಆಗಿತ್ತು. ಈ ಹಿನ್ನೆಲೆ ವಿಜಯೇಂದ್ರ ಅವರು ಮನೆಗೆ ಆಗಮಿಸಿ, ವಿರೂಪಾಕ್ಷಪ್ಪನವರ ಆರೋಗ್ಯ ವಿಚಾರಿಸಿದ್ದಾರೆ. ಸೋಮವಾರ ನಿಗದಿಯಾದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ಪ್ರಚಾರ ಸಭೆಯಲ್ಲಿ ವಿರೂಪಾಕ್ಷಪ್ಪ ಸಹ ಇರ್ತಾರೆ ಎಂದು ಸ್ಪಷ್ಟಪಡಿಸಿದರು.