ETV Bharat / entertainment

ಕನ್ನಡದ ಹಿರಿಯ ನಟ ಟಿ. ತಿಮ್ಮಯ್ಯ ಹೃದಯಾಘಾತದಿಂದ ನಿಧನ - ACTOR T THIMMAIAH DIED

ಕನ್ನಡ ಚಿತ್ರರಂಗದ ಹಿರಿಯ ನಟ ಟಿ. ತಿಮ್ಮಯ್ಯ ಅವರು ನಿಧನ ಹೊಂದಿದ್ದಾರೆ

Thimmaiah
ಟಿ. ತಿಮ್ಮಯ್ಯ (ETV Bharat)
author img

By ETV Bharat Karnataka Team

Published : Nov 16, 2024, 10:23 PM IST

ಡಾ.ರಾಜ್‌ಕುಮಾ‌ರ್, ಡಾ.ವಿಷ್ಣುವರ್ಧನ್ ಹಾಗೂ ಅನಂತ್ ನಾಗ್ ಅವ​​ರಂತಹ ದಿಗ್ಗಜ ನಟರ ಜೊತೆ ಅಭಿನಯಿಸಿ ಗಮನ ಸೆಳೆದಿದ್ದ ನಟ ಟಿ.ತಿಮ್ಮಯ್ಯ (92) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಟಿ. ತಿಮ್ಮಯ್ಯನವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾಜ್​ಕುಮಾರ್ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಿದ್ದ ತಿಮ್ಮಯ್ಯ, ಕೇವಲ ಚಿತ್ರರಂಗದ ಪಾತ್ರದಾರರಷ್ಟೇ ಆಗಿರದೇ, ಪ್ರೇಕ್ಷಕರ ಹೃದಯ ಗೆದ್ದ ನಟರಾಗಿಯೂ ಹೆಸರು ಮಾಡಿದ್ದರು.

'ಚಲಿಸುವ ಮೋಡಗಳು', 'ಬಂಧನ', 'ಪ್ರತಿಧ್ವನಿ', 'ಬೆಂಕಿಯ ಬಲೆ', 'ಪರಮೇಶಿ ಪ್ರೇಮ ಪ್ರಸಂಗ', 'ಭಾಗ್ಯದ ಲಕ್ಷ್ಮಿ ಬಾರಮ್ಮ', 'ಕರ್ಣ', 'ಕುರುಕ್ಷೇತ್ರ', 'ನಿಷ್ಕರ್ಷ', 'ಬೆಳದಿಂಗಳ ಬಾಲೆ' ಸೇರಿ ಮುಂತಾದ ಹಲವು ಯಶಸ್ವಿ ಕನ್ನಡ ಸಿನಿಮಾಗಳಲ್ಲಿ ಟಿ. ತಿಮ್ಮಯ್ಯ ಅಭಿನಯಿಸಿದ್ದರು‌.

Thimmaiah
ಟಿ. ತಿಮ್ಮಯ್ಯ (ETV Bharat)

ಕನ್ನಡದ ಪ್ರಖ್ಯಾತ ನಿರ್ದೇಶಕರಾದ ದೊರೈ ಭಗವಾನ್, ಸುನೀಲ್ ಕುಮಾರ್ ದೇಸಾಯಿ, ಭಾರ್ಗವ, ಸಂಗೀತಂ ಶ್ರೀನಿವಾಸ್ ರಾವ್, ಕೆ.ವಿ.ಜಯರಾಮ್ ಅವರ ಜೊತೆ ಟಿ. ತಿಮ್ಮಯ್ಯನವರು ಕೆಲಸ ಮಾಡಿದ್ದಾರೆ. 80ರ ದಶಕದಲ್ಲಿ ರಂಗಭೂಮಿ ಹಿನ್ನೆಲೆಯಿಂದ ಚಿತ್ರರಂಗಕ್ಕೆ ಬಂದ ತಿಮ್ಮಯ್ಯನವರು ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಳೆ ಮಧ್ಯಾಹ್ನ 12 ಗಂಟೆಗೆ ಬನಶಂಕರಿ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Thimmaiah
ಟಿ. ತಿಮ್ಮಯ್ಯ (ETV Bharat)

ಇದನ್ನೂ ಓದಿ: 'ನರಸಿಂಹ' ಸಿನಿಮಾ ಘೋಷಿಸಿದ ಕೆಜಿಎಫ್​ ಮೇಕರ್​ ಹೊಂಬಾಳೆ ಫಿಲ್ಮ್ಸ್: ನಟ ಯಾರು? ಮೋಷನ್​ ಪೋಸ್ಟರ್ ನೋಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.