ಮಗಳ ಸಾವಿನ ಸುದ್ದಿ ಮುಚ್ಚಿಟ್ಟ ಕೆಎಸ್ಆರ್ಟಿಸಿ ಸಿಬ್ಬಂದಿ.. ಕರಳು ಹಿಂಡುವಂತಿದೆ ಅಪ್ಪನ ರೋದನೆ
🎬 Watch Now: Feature Video
ಅನಾರೋಗ್ಯಕ್ಕೆ ತುತ್ತಾಗಿದ್ದ ಮಗಳನ್ನು ಮನೆಯಲ್ಲೇ ಬಿಟ್ಟು ಆ ತಂದೆ ಕರ್ತವ್ಯಕ್ಕೆ ಹಾಜರಾಗಿದ್ರು. ಬಸ್ ಕಂಡಕ್ಟರ್ ಆಗಿರುವ ಆತ ಕರ್ತವ್ಯ ಮುಗಿಸಿ ಡಿಪೋಗೆ ಮರಳಿದಾಗ ಆಘಾತ ಕಾದಿತ್ತು. ಕಾರಣ, ಪ್ರೀತಿಯ ಮಗಳು ಸಾವಿನ ಮನೆ ಸೇರಿ ಆಗಿತ್ತು. ಮಗಳ ಮುಖವನ್ನು ಕೊನೆಯ ಬಾರಿಗೆ ಆ ತಂದೆ ನೋಡಲೇ ಇಲ್ಲ. ಮಗಳು ಮರಣಿಸಿದ ಬಗ್ಗೆ ಫೋನ್ ಕರೆ ಬಂದರೂ ಕರ್ತವ್ಯದಲ್ಲಿದ್ದ ತಂದೆಗೆ ಮುಟ್ಟಿಸದೇ ಅಧಿಕಾರಿಗಳು ಅಮಾನವೀಯತೆ ಮೆರೆದ್ರು.