ಕೂಲ್ ಮಗಾ ಕೂಲ್.. ಸಾಂಪ್ರದಾಯಿಕ ಫ್ರಿಡ್ಜ್‌ಗೆ ಫುಲ್ ಡಿಮ್ಯಾಂಡ್.. ಮಡಿಕೆಗಳಿಗೂ ಹೈಟೆಕ್ ಸ್ಪರ್ಶ! - ಸೂರ್ಯನ ಆಭರ್ಟ
🎬 Watch Now: Feature Video
ತುಮಕೂರು: ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನ ಮನೆಯಿಂದ ಹೊರ ಬರಲೂ ಹಿಂಜರಿಯುತ್ತಿದ್ದಾರೆ. ಉರಿಯುವ ಸೂರ್ಯನ ಆರ್ಭಟದಿಂದಾಗಿ ನೆಲಕ್ಕೆ ಕಾಲಿಟ್ಟರೆ ಕೆಂಡವೇ ನೆಲವಾಗಿದೆಯೇನೋ ಎಂಬ ಸ್ಥಿತಿಯಿದೆ. ಮನೆಯಲ್ಲಿ ಕೂತರೆ ಸೆಕೆ, ಇಂಥ ಪರಿಸ್ಥಿತಿಯಲ್ಲಿ ಹೊಟ್ಟೆ ತಣ್ಣಗಿರಿಸಲು ಜನ ಬಡವರ ಫ್ರಿಡ್ಜ್ ಮೊರೆ ಹೋಗುತ್ತಿದ್ದಾರೆ. ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇಲ್ಲದ ಕಾರಣ ತಣ್ಣನೆಯ ನೀರು ಸಿಗಲ್ಲ. ಆದರೆ, ಕೈಗೆಟುಕುವ ದರದಲ್ಲಿ ಸಿಗುವ ಮಣ್ಣಿನ ಮಡಿಕೆಗಳಿಗೆ ಬಹುತೇಕರು ಮೊರೆ ಹೋಗುತ್ತಿದ್ದಾರೆ.