ಕಾರವಾರ: ಅಕ್ರಮ ಮದ್ಯ ವಶಕ್ಕೆ ಪಡೆದ ಅಧಿಕಾರಿಗಳು - ಕಾರವಾರ : ಅಕ್ರಮ ಮದ್ಯ ವಶಕ್ಕೆ ಪಡೆದೆ ಅಬಕಾರಿ ಇಲಾಖೆ ಅಧಿಕಾರಿ

🎬 Watch Now: Feature Video

thumbnail

By

Published : Mar 31, 2020, 2:00 PM IST

ಕಾರವಾರ: ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ಕಾರವಾರ ತಾಲೂಕಿನ ಮುಡಗೇರಿ ಬಳಿ ನಡೆದಿದೆ. ಗೋವಾದಿಂದ ಸಾಗಿಸಿದ್ದ ಸುಮಾರು 120 ಲೀಟರ್ ಅಕ್ರಮ ಮದ್ಯವನ್ನು ಮುಡಗೇರಿ ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ನಿರೀಕ್ಷಕಿ ಸುವರ್ಣ ನಾಯ್ಕ ನೇತೃತ್ವದಲ್ಲಿ ದಾಳಿ ನಡೆಸಿದ ಸಿಬ್ಬಂದಿ 120 ಲೀಟರ್​ನ ಸುಮಾರು 49 ಸಾವಿರ ರೂ ಮೌಲ್ಯದ ಮದ್ಯ ವಶಕ್ಕೆ ಪಡೆಯಲಾಗಿದೆ. ಯಾವುದೇ ಆರೋಪಿಗಳು ಪತ್ತೆಯಾಗಿಲ್ಲ. ಈ ಬಗ್ಗೆ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.