ಮೀನುಗಾರರಿಂದ ಕಾರವಾರ ಬಂದ್ಗೆ ಕರೆ.. ಮುಷ್ಕರಕ್ಕೆ ಸಂಪೂರ್ಣ ಬೆಂಬಲ - ಮೀನುಗಾರರಿಂದ ಕಾರವಾರ ಬಂದ್ಗೆ ಕರೆ
🎬 Watch Now: Feature Video
ಕಾರವಾರ: ಸಾಗರಮಾಲಾ ಯೋಜನೆಯಡಿ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಕಾರವಾರ ಮೀನುಗಾರರು ಕರೆಕೊಟ್ಟಿರುವ ಬಂದ್ಗೆ ಮುಂಜಾನೆಯಿಂದಲೇ ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನಗರದ ಅಂಗಡಿ ಮುಂಗಟ್ಟುಗಳು ಬಂದಾಗಿದ್ದು, ಸಾರಿಗೆ ಹಾಗೂ ಖಾಸಗಿ ವಾಹನಗಳ ಸಂಚಾರ ಕೂಡ ಸ್ಥಗಿತಗೊಂಡಿದೆ. ಶಾಲಾ ಕಾಲೇಜುಗಳಿಗೆ ಈವರೆಗೂ ರಜೆ ಘೋಷಣೆಯಾಗಿಲ್ಲ. ಬೆಳಗ್ಗೆ 9 ಗಂಟೆ ಸುಮಾರಿಗೆ ಮೀನುಗಾರರು ಸೇರಿದಂತೆ ವಿವಿಧ ಸಂಘಟನೆಗಳು ನಗರದ ಮಿತ್ರಸಮಾಜದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಲಿದ್ದು, ಯೋಜನೆಗೆ ವಿರೋಧ ವ್ಯಕ್ತಪಡಿಸಲಿವೆ. ಈ ಕಾರಣದಿಂದ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದ್ದು ಹದ್ದಿನ ಕಣ್ಣಿಡಲಾಗಿದೆ. ನಗರದ ಸದ್ಯದ ಸ್ಥಿತಿಗಳ ಕುರಿತು ವರದಿ ಇಲ್ಲಿದೆ ನೋಡಿ.