ಪ್ರಮಾಣ ವಚನ ಸ್ವೀಕರಿಸ್ತಿದ್ದಂತೆ ಸಿಎಂ ಕಾಲಿಗೆ ಬಿದ್ದ ಸೋಮಶೇಖರ್... ವಿಡಿಯೋ! - ಸಿಎಂ ಕಾಲಿಗೆ ಬಿದ್ದ ಸೋಮಶೇಖರ್
🎬 Watch Now: Feature Video

ಬೆಂಗಳೂರು: ಅನರ್ಹತೆಯಿಂದ ಅರ್ಹಗೊಂಡು ಇದೀಗ ಬಿಎಸ್ವೈ ಸಂಪುಟದಲ್ಲಿ ಸಚಿವರಾಗಿ 10 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಮೊದಲಿಗರಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ಟಿ ಸೋಮಶೇಖರ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಎಸ್ಟಿ ಸೋಮಶೇಖರ್ ದಾಖಲು ಬುಕ್ಗೆ ಸಹಿ ಹಾಕದೇ ನೇರವಾಗಿ ಸಿಎಂ ಬಳಿ ತೆರಳಿ ಅವರ ಕಾಲಿಗೆ ನಮಸ್ಕಾರ ಮಾಡಿದ್ರು. ಈ ವೇಳೆ ಸಹಿ ಹಾಕುವಂತೆ ಬಿಎಸ್ವೈ ಸೂಚನೆ ನೀಡಿದ್ದಾರೆ.