ವಿಧಾನಸಭೆಯಲ್ಲಿ ‘ತುಕಡೆ ಗ್ಯಾಂಗ್’ ವಾಕ್ಸಮರ : ವಿಡಿಯೋ ನೋಡಿ - Karnataka Assembly
🎬 Watch Now: Feature Video
ಸದನದಲ್ಲಿ ಸಿಎಎ, ಎನ್ಆರ್ಸಿ ಬಗೆಗಿನ ಚರ್ಚೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತಿನ ಜಟಾಪಟಿ ನಡೆಯಿತು. ಇದೇ ವೇಳೆ ಕಾಂಗ್ರೆಸ್ನಲ್ಲಿ ಭಾರತ್ ಮಾತಾಕಿ ಜೈ ಅಂದ್ರೆ ದೇಶದ್ರೋಹ ಎಂದು ಈಶ್ವರಪ್ಪನವರು ಹೇಳಿದ್ದಕ್ಕೆ, ಭಾರತ ಮಾತೆ ನಿಮ್ಮ ಆಸ್ತಿಯಲ್ಲ. ನಾವೆಲ್ಲ ಭಾರತ ಮಾತೆಯ ಮಕ್ಕಳೇ, 135 ಕೋಟಿ ಜನ ಭಾರತ ಮಾತೆಯ ಮಕ್ಕಳು ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದಕ್ಕೆ ಸಚಿವ ಸಿ.ಟಿ.ರವಿ ಅದರಲ್ಲಿ ಕೆಲವರು ತುಕಡೆ ಗ್ಯಾಂಗ್ ಎಂದು ವ್ಯಂಗ್ಯವಾಡಿದಾಗ ಸದನದಲ್ಲಿ ವಾಗ್ವಾದ ಸೃಷ್ಟಿಯಾಯಿತು. ಪ್ರಿಯಾಂಕ್ ಖರ್ಗೆ ತುಕಡೆ ಗ್ಯಾಂಗ್ ಯಾರು ಎಂದು ಬಹಿರಂಗ ಪಡಿಸಿ ಎಂದಾಗ, ಬೊಮ್ಮಾಯಿ ನಮ್ಮ ಬಳಿ ಲಿಸ್ಟ್ ಇದೆ ಎಂದರು.