ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿ ಬಾನೆತ್ತರಕ್ಕೆ ಹಾರಿತು 65 ಅಡಿ ಉದ್ದದ ಕನ್ನಡ ಧ್ವಜ - ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿ ಬಾನೆತ್ತರಕ್ಕೆ ಹಾರಿದ ಕನ್ನಡ ಧ್ವಜ
🎬 Watch Now: Feature Video

ಕನ್ನಡ ರಾಜ್ಯೋತ್ಸವದ ನಿಮಿತ್ತ ಬಳ್ಳಾರಿಯ ಏಕಶಿಲಾ ಬೆಟ್ಟದಲ್ಲಿ 65 ಅಡಿ ಉದ್ದದ ಕನ್ನಡ ಭಾವುಟವನ್ನ ಹಾರಿಸಲಾಯಿತು. ಬಳ್ಳಾರಿಯ ಕೋಟೆ ಮುಖ್ಯದ್ವಾರದ ಬಾಗಿಲು ಎದುರೆ ನವಕರ್ನಾಟಕ ಯುವಶಕ್ತಿ ಸಂಘಟನೆಯ ಮುಖಂಡರಾದ ಸಿದ್ಮಲ್ ಮಂಜುನಾಥ, ಕಪ್ಪಗಲ್ಲು ಚಂದ್ರಶೇಖರ ಆಚಾರ್ ನೇತೃತ್ವದಲ್ಲಿ ಇಂದು ಬೆಳಗ್ಗೆ ಕನ್ನಡತಾಯಿ ಭುವನೇಶ್ವರಿ ಮಾತೆಗೆ ವಿಶೇಷಪೂಜೆ ಸಲ್ಲಿಸಿದರು. ಬಳಿಕ ಏಕಶಿಲಾ ಬೆಟ್ಟದಲ್ಲಿ 65 ಅಡಿ ಉದ್ದದ ಕನ್ನಡ ಬಾವುಟವನ್ನ ಹಾರಿಸಿದರು.