ನಿರ್ಭಯಾ ಹಂತಕರಿಗೆ ಗಲ್ಲು: ಸಿಹಿ ಹಂಚಿ ಸಂಭ್ರಮಿಸಿದ ಕನ್ನಡಪರ ಹೋರಾಟಗಾರರು - ಬೆಂಗಳೂರು ಲೇಟೆಸ್ಟ್ ನ್ಯೂಸ್
🎬 Watch Now: Feature Video
ಬೆಂಗಳೂರು: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣದ ನಾಲ್ವರು ಹಂತಕರನ್ನು ಇಂದು ಗಲ್ಲಿಗೇರಿಸಿದ್ದು, ಇಡೀ ದೇಶದೆಲ್ಲೆಡೆ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಇಂದು ಕಂಠೀರವ ಸ್ಟುಡಿಯೋದ ಡಾ. ರಾಜ್ಕುಮಾರ್ ಸ್ಮಾರಕದ ಬಳಿ ಕನ್ನಡ ಸಂಘಟನೆಗಳ ಒಕ್ಕೂಟದ ಸದಸ್ಯರು ಸಿಹಿ ಹಂಚುವ ಮೂಲಕ ದುಷ್ಟರ ಸಂಹಾರವನ್ನು ಸಂಭ್ರಮಿಸಿದ್ದಾರೆ. ಸ್ಟುಡಿಯೋ ಬಳಿ ಒಡಾಡುವ ಬಸ್ಗಳನ್ನು ಅಡ್ಡ ಹಾಕಿ ಪ್ರಯಾಣಿಕರಿಗೆ ಸಿಹಿ ಹಂಚುವ ಮೂಲಕ ಹೋರಾಟಗಾರರು ಸಂಭ್ರಮಿಸಿದ್ದಾರೆ.