'ಐ ಡೋಂಟ್ ನೋ ಕನ್ನಡ' ಎಂದ ಬ್ಯಾಂಕ್ ಸಿಬ್ಬಂದಿ: ಕನ್ನಡ ಸಂಘಟನೆಯಿಂದ ಬ್ಯಾಂಕ್ ಮುತ್ತಿಗೆ - Kannada organizations outrage against Bank staff
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14384914-thumbnail-3x2-news.jpg)
ದೊಡ್ಡಬಳ್ಳಾಪುರ: ನಗರದ ಕನ್ನಡ ಜಾಗೃತ ಭವನದ ಬಳಿ ಇರುವ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಿಬ್ಬಂದಿಯೊಬ್ಬರು ಬ್ಯಾಂಕ್ ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗ, 'ಐ ಡೋಂಟ್ ನೋ ಕನ್ನಡ' ಎಂದು ಅತಿರೇಕದ ವರ್ತನೆ ತೋರಿದ್ದಾರೆ ಎಂದು, ಆಕ್ರೋಶಗೊಂಡ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಬ್ಯಾಂಕ್ ಮುತ್ತಿಗೆ ಹಾಕಿ ಬ್ಯಾಂಕ್ ವಿರುದ್ಧ ಘೋಷಣೆ ಕೂಗಿದರು. ಬ್ಯಾಂಕ್ಗೆ ಬರುವ ಹೆಚ್ಚಿನ ಜನರು ಗ್ರಾಮೀಣರು. ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿಲ್ಲ. ಅವರೊಂದಿಗೆ ಕನ್ನಡ ಭಾಷೆಯಲ್ಲಿ ವ್ಯವಹರಿಸಿ ಸೌಜನ್ಯದಿಂದ ವರ್ತಿಸಿ ಎಂದು ಮನವರಿಕೆ ಮಾಡಿದರು. ಅಲ್ಲದೇ ಗ್ರಾಹಕರಿಗೆ ತೊಂದರೆಯಾಗದಂತೆ ಕನ್ನಡ ಸಹಾಯಕರನ್ನ ನೇಮಿಸಿಕೊಳ್ಳಿ ಎಂದು ಸಲಹೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಬ್ಯಾಂಕ್ ವ್ಯವಸ್ಥಾಪಕ ನಿದೇರ್ಶಕರು ಪ್ರತಿಭಟನಾನಿರನ್ನು ಸಮಾಧಾನಗೊಳಿಸಿ, ಬ್ಯಾಂಕ್ ಸಿಬ್ಬಂದಿಯಿಂದ ಕನ್ನಡದಲ್ಲಿ ಕ್ಷಮೆ ಕೇಳಿಸಿದರು.