ಬಾಗಲಕೋಟೆ,ಕೋಲಾರದಲ್ಲೂ ಭಕ್ತ ಕನಕದಾಸರ ಜಯಂತಿ ಆಚರಣೆ.. - ಕೋಲಾರ ಕನಕ ದಾಸ ಜಯಂತಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5073991-thumbnail-3x2-bngjpg.jpg)
ಬಾಗಲಕೋಟೆ/ಕೋಲಾರ:ಇಂದು ನಗರದಲ್ಲಿ ಭಕ್ತ ಕನಕದಾಸ ಜಯಂತಿಯನ್ನ ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ರಾಜೇಂದ್ರ ಹಾಗೂ ಜಿಪಂ ಅಧ್ಯಕ್ಷ ಬಾಯಕ್ಕ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡದರು.
ಇದೇ ವೇಳೆ ರಾಮದುರ್ಗ ತಾಲೂಕಿನ ಮಹಿಳಾ ಸಂಘಟನೆ ವತಿಯಿಂದ ಡೊಳ್ಳು ಕುಣಿತ,ಯುವಕರ ಹೆಜ್ಜೆಮೇಳ ಹಾಗೂ ಕರಡಿ ಮೇಳ ಸೇರಿ ಮಹಿಳೆಯರು ಕುಂಬ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ನವನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು. ಅದರಂತೆ ಕೋಲಾರದಲ್ಲೂ ಕನಕದಾಸ ಜಯಂತಿಯನ್ನು ಆಚರಣೆ ಮಾಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಜಿಲ್ಲಾ ಕುರುಬರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ನಾಗೇಶ್ ಅವರು ಉದ್ಘಾಟಿಸಿದ್ರು. ಇದೇ ವೇಳೆ ಮಾಜಿ ಸಂಸದ, ಶಾಸಕ ಹಾಗೂ ಹಾಲಿ ಸಂಸದ, ಶಾಸಕರು ಒಂದೇ ವೇದಿಕೆಯಲ್ಲಿ ಕಂಡು ಬಂದರು. ಅಲ್ಲದೆ ಪುಷ್ಪ ಪಲ್ಲಕ್ಕಿಗಳೊಂದಿಗೆ ನಗರದೆಲ್ಲೆಡೆ ಮೆರವಣಿಗೆ ಮಾಡಿಡಲಾಯಿತು.
Last Updated : Nov 15, 2019, 6:20 PM IST