ಮೋಡ, ಮಳೆಗೆ ಕೈಕೊಟ್ಟ ಬೆಳೆ... ಮತ್ತೆ ಸಂಕಷ್ಟದಲ್ಲಿ ಅನ್ನದಾತ! - Kalaburgi crop damaged news
🎬 Watch Now: Feature Video
ರೈತರ ಕಷ್ಟ ಕರುಗುವುದೇ ಇಲ್ಲ ಅನ್ಸತ್ತೆ. ಯಾಕಂದ್ರೆ ಬೆಳೆ ಬಂದ್ರೆ ಬೆಲೆ ಇರಲ್ಲ, ಬೆಲೆ ಇದ್ರೆ ಬೆಳೆ ಬರಲ್ಲ. ಇದೀಗ ಸಮೃದ್ಧ ಬೆಳೆ ಬರ್ತಿದೆ ಎಂದು ಖುಷಿ ಪಡುವಷ್ಟರಲ್ಲಿ ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆಯಿಂದ ಬೆಳೆದ ಬೆಳೆ ಕೈ ಕೊಟ್ಟಿವೆ. ನಾಲ್ಕು ದಿನ ಕಲಬುರಗಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ, ಜಿಟಿಜಿಟಿ ಸುರಿದಿದೆ. ತೊಗರಿ ಬೆಳೆಯ ರಾಶಿ, ಫಸಲು ಮಾಡಲು ಕೊಯ್ದ ಬೆಳೆ ಹಾನಿಯಾಗಿದೆ. ಮಾತ್ರವಲ್ಲ ತಡವಾಗಿ ಬಿತ್ತಿದ ತೊಗರಿ ಹೂ ಬಿಡುವಷ್ಟರಲ್ಲಿ ಮಂಜು ಕವಿದ ವಾತಾವರಣದ ಪರಿಣಾಮ ಹೂ ಉದುರಿ ಬಿದ್ದಿವೆ. ಬೆಳೆದು ನಿಂತಿದ್ದ ಜೋಳದ ಬೆಳೆಯ ಕಾಳು ಉದುರುತ್ತಿವೆ. ಕಪ್ಪು ಒಡೆಯುತ್ತಿವೆ. ಅದರ ಜೊತೆಗೆ ತೋಟಗಾರಿಕೆ ಬೆಳೆಗೂ ಹೊಡೆತ ಬಿದ್ದಿದೆ. ತರಕಾರಿಗಳು ಬೇರೆಯ ಬಣ್ಣಕ್ಕೆ ತಿರುಗಿ ಹಾನಿಯಾಗಿವೆ. ತರಕಾರಿ ಕೈಕೊಟ್ಟ ಕಾರಣ ಅವನ್ನು ದನಕರುಗಳಿಗೆ ತಿನ್ನಲು ಬಿಡಲಾಗುತ್ತಿದೆ. ಒಟ್ಟಾರೆ ಬೆಳೆ ಕೈ ಸೇರುವ ಮುನ್ನವೆ ಪ್ರಕೃತಿಯ ಏರುಪೇರಿನಿಂದ ಹಾನಿಯಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಸ್ಥಿತಿ ನಿರ್ಮಾಣವಾಗಿದೆ.