ಎಂಟಿಬಿ ನಾಗರಾಜ್‌ಗೆ 'ಟಗರು' ಉಡುಗೊರೆ ನೀಡಿದ ಅಭಿಮಾನಿ! - jumbuck gifted to mtb Nagaraju in hosakote

🎬 Watch Now: Feature Video

thumbnail

By

Published : Jan 18, 2021, 10:55 PM IST

ಹೊಸಕೋಟೆ ತಾಲೂಕಿನ‌ ಅನುಗೊಂಡಹಳ್ಳಿ ಹೋಬಳಿಯ ಸಿದ್ದನಹಳ್ಳಿಯ ಸಂತೋಷ್ ಎಂಬ ಯುವಕ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಟಗರುವೊಂದನ್ನು ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ. ತಾಲೂಕಿನ ನಾಗನಾಯಕನ ಕೋಟೆಯಲ್ಲಿ ನೂತನ ಸಚಿವರಾಗಿ ಪದಗ್ರಹಣ ಸ್ವೀಕರಿಸಿದ ನಾಗರಾಜ್‌ ಅವರಿಗೆ ಅಭಿನಂದನೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಗ್ರಾಮಸ್ಥರು ಟಗರಿಗೆ ತ್ರಿವರ್ಣ ಧ್ವಜದ ಬಣ್ಣ ಹಚ್ಚಿ ಅದರಲ್ಲಿ ಎಂಟಿಬಿ ಎಂದು ಬರೆದಿದ್ದ ಟಗರನ್ನು ಉಡುಗೊರೆಯಾಗಿ ನೀಡಿದ್ದಾರೆ. ಮತ್ತೋರ್ವ ಅಭಿಮಾನಿ ದೊಡ್ಡನಲ್ಲೂರಹಳ್ಳಿ ಮೂರ್ತಿ ಎದೆಯ ಮೇಲೆ ಎಂಟಿಬಿ ಎಂದು ಹಚ್ಚೆ ಹಾಕಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.