ಮೂರು ಸುತ್ತು ಗುಂಡು ಹಾರಿಸಿ ಜ್ಯುವೆಲ್ಲರಿ ಶಾಪ್ ರಾಬರಿ; ಈಟಿವಿ ಭಾರತ್ ಬಳಿ ಎಕ್ಸ್ಕ್ಲೂಸಿವ್ ವಿಡಿಯೋ - ಈಟಿವಿ ಭಾರತ್ ಎಕ್ಸ್ಕ್ಯ್ಲೂಸಿವ್
🎬 Watch Now: Feature Video
ಚಿಕ್ಕಮಗಳೂರು ನಗರದ ಎಂ ಜಿ ರಸ್ತೆಯಲ್ಲಿರುವ, ಕೇಸರಿ ಜ್ಯುವೆಲ್ಲರಿ ಶಾಪ್ಗೆ ಹಾಡ ಹಗಲೇ ಬೈಕ್ ನಲ್ಲಿ ಬಂದ ಮೂರು ಜನ ಆಗಂತುಕರು ಶಾಪ್ ಒಳಗೆ ನುಗ್ಗಿ, ಪಿಸ್ತೂಲಿನಿಂದ 3 ರೌಂಡ್ ಗುಂಡು ಹಾರಿಸಿ, ಚಿನ್ನ ಹಾಗೂ ಬೆಳ್ಳಿ ದರೋಡೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಬೆಳಗ್ಗೆ 11.25 ರ ವೇಳೆಗೆ ಒಂದೇ ಬೈಕ್ನಲ್ಲಿ ಬಂದಂತಹ ಮೂರು ಜನರು, ನೇರವಾಗಿ ಕೇಸರಿ ಜ್ಯುವೆಲ್ಲರಿ ಶಾಪ್ನೊಳಗೆ ನುಗ್ಗಿದ್ದಾರೆ. ಈ ವೇಳೆ ಅಂಗಡಿ ಮಾಲೀಕರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅಂಗಡಿಯೊಳಗೆ ಒಳಗಿದ್ದ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಈ ಮೂರು ಜನ ಆರೋಪಿಗಳು ಬೈಕ್ನಲ್ಲಿ ಬಂದು ಹೋಗಿರುವ ದೃಶ್ಯ, ದರೋಡೆಗೆ ಯಾವ ರೀತಿ ಯತ್ನ ಮಾಡಿರುವ ಎಲ್ಲ ಚಟುವಟಿಕೆಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದು ಈಟಿವಿ ಭಾರತ್ನ.... ಎಕ್ಸ್ಕ್ಲೂಸಿವ್ ವಿಡಿಯೋ.