ಜನತಾ ಕರ್ಫ್ಯೂಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ: ವೈದ್ಯ, ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ ಜನ - ಕರ್ನಾಟಕದಲ್ಲಿ ಕೊರೊನಾ ವೈರಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6510462-thumbnail-3x2-rural.jpg)
ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂಗೆ ಕರೆ ನೀಡಿದರು. ಹಾವೇರಿಯ ಬ್ಯಾಡಗಿ, ರಾಮನಗರ, ಬೆಳಗಾವಿ, ರಾಯಚೂರು ಹಾಗೂ ಬೆಂಗಳೂರಿನ ಯಶವಂತಪುರದಲ್ಲಿ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ- ಬಸ್ ಸಂಚಾರ ಎಲ್ಲಾ ಹೋಟೆಲ್, ಬಾರ್ಗಳು ಬಂದ್ ಆಗಿದ್ದವು. ಖಾಸಗಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿಯದ ಕಾರಣ ಪ್ರಯಾಣಿಕರಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ತುರ್ತು ಅವಶ್ಯಕತೆಗಳಾದ ಮೆಡಿಕಲ್ ಶಾಪ್, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಸಂಜೆ 5 ಗಂಟೆಯ ವೇಳೆಗೆ ಆರೋಗ್ಯ, ರಕ್ಷಣೆ ಹಾಗೂ ಸ್ವಚ್ಛತಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವರಿಗೆ ನಾಗರಿಕರು ಗಂಟೆ, ಜಾಗಟೆ, ಕೊಳಲು, ಚಪ್ಪಾಳೆ ಬಾರಿಸಿ ಗೌರವ ಸಲ್ಲಿಸಿದರು.