ಗ್ರಾಮಕ್ಕೆ ಯಾರೂ ಬರದಂತೆ ಮುಖ್ಯ ರಸ್ತೆಯಲ್ಲೇ ದೊಣ್ಣೆ ಹಿಡಿದು ನಿಂತ ಯುವಕರು - ಕೊರೊನಾ ವೈರಸ್ ತಡೆಗಟ್ಟಲು ಚಿಕ್ಕೋಡಿಯಲ್ಲಿ ರಸ್ತೆ ಬಂದ್
🎬 Watch Now: Feature Video
ಕೊರೊನಾ ವೈರಸ್ ಹರಡುವಿಕೆ ತಡೆಯಲು ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಟನಾಳ ಗ್ರಾಮಸ್ಥರು ಗ್ರಾಮವನ್ನು ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಗ್ರಾಮದ ಪ್ರವೇಶದ ಮುಖ್ಯ ರಸ್ತೆಗೆ ಮುಳ್ಳಕಂಟಿ, ಕಲ್ಲುಗಳನ್ನು ಇಟ್ಟು ಇಡೀ ಗ್ರಾಮಕ್ಕೆ ಸ್ವಯಂ ಲಾಕ್‌ಡೌನ್ ಮಾಡಿದ್ದಾರೆ. ಏ.14 ರ ವರೆಗೂ ಬೇರೆ ಊರಿನವರು ಹಾಗೂ ಹೊರಗಿನವರು ಯಾರೂ ಗ್ರಾಮ ಪ್ರವೇಶಿಸದಂತೆ ರಸ್ತೆ ಬಂದ್ ಮಾಡಲಾಗಿದ್ದು, ಗ್ರಾಮದೊಳಗೆ ಪ್ರವೇಶಿಸಿದಂತೆ ಕೈಯಲ್ಲಿ ಕೋಲು ಹಿಡಿದು ಯುವಕರು ರಸ್ತೆಯಲ್ಲೇ ನಿಂತಿದ್ದಾರೆ.