ತುಮಕೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಹೀಗಿತ್ತು.. - Tumkur Station Officer Shivakumar
🎬 Watch Now: Feature Video
ನಗರದ ಬಸ್ ನಿಲ್ದಾಣದಿಂದ ಇಂದು ಬಸ್‌ಗಳ ಸಂಚಾರ ಆರಂಭವಾಗಿದ್ದರೂ ಪ್ರಯಾಣಿಕರು ಮಾತ್ರ ಭಯದಿಂದಲೇ ಸಂಚರಿಸುತ್ತಿದ್ದು, ಸಹಜ ಸ್ಥಿತಿಗೆ ಬರಲು ಅನೇಕ ದಿನಗಳೇ ಬೇಕಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಅವರು, ಬೆಳಗ್ಗೆಯಿಂದ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅನೇಕ ಕ್ರಮ ತೆಗೆದುಕೊಳ್ಳಲಾಗಿದೆ. ನಿತ್ಯ 20 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಬಸ್ಗಳಲ್ಲಿ ಇಂದು ಕೇವಲ 3 ಸಾವಿರ ಪ್ರಯಾಣಿಕರು ಪ್ರಯಾಣಿಸಿದರು ಎಂದಿದ್ದಾರೆ..