ಹೊನ್ನಾವರದ 'ಕಾಸರಕೋಡು' ಬೀಚ್ಗೆ ಅಂತಾರಾಷ್ಟ್ರೀಯ 'ಬ್ಲೂ ಫ್ಲ್ಯಾಗ್' ಮಾನ್ಯತೆ - Blue Flag recognition for Kasarakodu Beach
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9161176-424-9161176-1602589525879.jpg)
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡಿನಲ್ಲಿರುವ ಇಕೋ ಬೀಚ್ ಇದೀಗ ಅಂತಾರಾಷ್ಟ್ರೀಯ ಮಟ್ಟದ ಬೀಚ್‌ಗಳಂತೆ ಮೇಲ್ದರ್ಜೆಗೇರಿದೆ. ಕಡಲತೀರಕ್ಕೆ ಬರುವ ಪ್ರವಾಸಿಗರಿಗೆ ಕುಳಿತುಕೊಳ್ಳುವ ಆಸನದಿಂದ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆಯನ್ನ ಕಾಯ್ದುಕೊಳ್ಳಲು ಪ್ರತ್ಯೇಕ ಸಿಬ್ಬಂದಿಯನ್ನು ಒಳಗೊಂಡು ವಿನೂತನ ಮಾದರಿಯಲ್ಲಿ ಸಿದ್ಧಗೊಂಡಿದೆ. ಈ ಮೂಲಕ ಇಷ್ಟು ದಿನ ಇಕೋ ಬೀಚ್ ಎಂದು ಕರೆಸಿಕೊಳ್ಳುತ್ತಿದ್ದ ಕಾಸರಕೋಡು ಬೀಚ್ ಇದೀಗ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆಯನ್ನು ಗಳಿಸಿಕೊಂಡಿದೆ.