ಕೊರೊನಾ ಸೋಂಕಿತ ಕಾಸರಗೋಡು ವ್ಯಕ್ತಿಯ ಸಂಪರ್ಕದಲ್ಲಿದ್ದವರ ತಪಾಸಣೆ: ಸಚಿವ ಶ್ರೀರಾಮುಲು - ವಿಮಾನದಲ್ಲಿದ್ದ ಪ್ರಯಾಣಿಕರ ತಪಾಸಣೆ
🎬 Watch Now: Feature Video

ಮಂಗಳೂರು: ಕಾಸರಗೋಡು ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆ ಕೇರಳದ ಕಾಸರಗೋಡು ಸರ್ವೆಲೆನ್ಸ್ ತಂಡ ಹಾಗೂ ಮಂಗಳೂರು ಸರ್ವೆಲೆನ್ಸ್ ತಂಡ ನಿಗಾ ವಹಿಸಿವೆ. ಕೊರೊನಾ ಸೋಂಕಿತ ವ್ಯಕ್ತಿ ಮಂಗಳೂರಿನಲ್ಲಿ ಅಡ್ಡಾಡಿರುವ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುತ್ತದೆ. ಆತ ಪ್ರಯಾಣಿಸಿದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ತಪಾಸಣೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.