ಭಾರತ ಲಾಕ್ ಡೌನ್ಗೆ ದುರ್ಗದ ಜನರು ಡೋಂಟ್ ಕೇರ್: ಲಾಠಿ ರುಚಿ ತೋರಿಸಿದ ಪೊಲೀಸರು - chithradurga People Don't Care
🎬 Watch Now: Feature Video
ಚಿತ್ರದುರ್ಗ: ಪ್ರಧಾನಿ ಮೋದಿ ಕರೆ ನೀಡಿರುವ ಭಾರತ ಲಾಕ್ ಡೌನ್ಗೆ ದುರ್ಗದ ಜನರು ಸರಿಯಾಗಿ ಸ್ಪಂದಿಸಿಲ್ಲ. ಕೆಲವರು ಮನೆಯಿಂದ ಹೊರ ಬಂದು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಸರ್ಕಾರದ ಆದೇಶವನ್ನು ಧಿಕ್ಕರಿಸಿ ಜನರು ಸಂಚರಿಸುತ್ತಿರುವುದನ್ನು ಕಂಡ ಪೊಲೀಸರು ಬೀದಿಗಿಳಿದು ಸಂಚಾರ ತಡೆಯಲು ಹರಸಾಹಸ ಪಡುತ್ತಿದ್ದಾರೆ. ಕೆಲ ವಾಹನ ಸವಾರರಿಗೆ ಲಾಠಿ ಏಟು ನೀಡಿ ಮನೆಗಳಿಗೆ ಕಳುಹಿಸುವ ಅನಿವಾರ್ಯ ಪರಿಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.