ಕೊರೊನಾ ಕರಿನೆರಳು: ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು - ಹಾಸನ ಡಿಡಿಪಿಐ ಕೆಎಸ್ ಪ್ರಕಾಶ್
🎬 Watch Now: Feature Video
ಹಾಸನ: ಖಾಸಗಿ ಶಾಲೆಗಳ ವ್ಯಾಮೋಹ, ಮಹಾನಗರಗಳಿಗೆ ಪಾಲಕರ ವಲಸೆ ಹೀಗೆ ನಾನಾ ಕಾರಣಗಳಿಂದ ಮುಚ್ಚಿದ್ದ ಹಲವು ಸರ್ಕಾರಿ ಶಾಲೆಗಳು ಕೊರೊನಾ ಸೃಷ್ಟಿಸಿದ ಆರ್ಥಿಕ ಹೊಡೆತದಿಂದ ಬಾಗಿಲು ತೆರೆಯುತ್ತಿವೆ. ಜಿಲ್ಲೆಯ 14 ಶಾಲೆಗಳು ಬಾಗಿಲು ತೆರೆಯಲು ಸಜ್ಜಾಗಿದ್ದು, ವಿದ್ಯಾಗಮ ಯೋಜನೆಯಡಿ 121 ಮಕ್ಕಳಿಗೆ ತರಗತಿ ನಡೆಸಲಾಗುತ್ತಿದೆ. ಸದ್ಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಡಿಡಿಪಿಐ ಕೆ.ಎಸ್.ಪ್ರಕಾಶ್ ತಿಳಿಸಿದ್ದಾರೆ.