ರಾತ್ರೋರಾತ್ರಿ ಕುರಿಗಳ ಕಳ್ಳತನ... ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಮಂಡ್ಯ ಜನ
🎬 Watch Now: Feature Video
ಮಂಡ್ಯ: ದುಷ್ಕರ್ಮಿಗಳ ತಂಡವೊಂದು ರೈತರ 14 ಕುರಿಗಳನ್ನು ಕಳವು ಮಾಡಿರುವ ಘಟನೆ ನಾಗಮಂಗಲ ಹಾಗೂ ಮದ್ದೂರು ತಾಲೂಕಿನಲ್ಲಿ ನಡೆದಿದೆ. ಮಾದರಹಳ್ಳಿ ಪುಟ್ಟಸ್ವಾಮಿಯ 7, ಹರಳಹಳ್ಳಿ ಶಿವಣ್ಣರ 3, ಮತ್ತು ಸೂನಗಳ್ಳಿ ಶಿವಣ್ಣರ 4 ಕುರಿಗಳನ್ನು ದುಷ್ಕರ್ಮಿಗಳು ಕೊಟ್ಟಿಗೆಯ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ. ರಾತ್ರಿ ಅಕ್ಕಪಕ್ಕದ ಮನೆಗಳ ಬಾಗಿಲಿನ ಚಿಲಕ ಹಾಕಿ, ಕೊಟ್ಟಿಗೆಯಿಂದ ಕುರಿಗಳನ್ನು ಕದ್ದೊಯ್ದಿದ್ದಾರೆ. ಈ ಸಂಬಂಧ ಕೆ.ಎಂ. ದೊಡ್ಡಿ ಮತ್ತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಗಮಂಗಲ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ 50ಕ್ಕೂ ಹೆಚ್ಚು ಕುರಿಗಳ ಕಳ್ಳತನವಾಗಿದೆ.