ಶಿವಮೊಗ್ಗದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು: ಪ್ರತ್ಯಕ್ಷ ವರದಿ
🎬 Watch Now: Feature Video
ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ 8 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 4 ILI ಪ್ರಕರಣಗಳು, 2 ದ್ವಿತೀಯ ಸಂಪರ್ಕ, ಒಂದು ಬೆಂಗಳೂರು ಪ್ರಯಾಣ ಇನ್ನೊಂದು ಸಂಪರ್ಕ ಪತ್ತೆಯಾಗಿಲ್ಲ. ಇಂದು ಸುಮಾರು 15ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣ ಬರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ನಿನ್ನೆ ದಾಖಲಾದ 8 ಪ್ರಕರಣಗಳು ಸೇರಿ ಒಟ್ಟು ಸೊಂಕಿತರ ಸಂಖ್ಯೆ 261ಕ್ಕೇರಿದೆ. ಇದರಲ್ಲಿ 117 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದ 140 ಜನರಿಗೆ ಚಿಕಿತ್ಸೆ ಮುಂದುವರೆದಿದೆ. ನಿನ್ನೆ ಸಿಗೇಹಟ್ಟಿಯ ವೃದ್ಧೆಯೊಬ್ಬರಲ್ಲಿ ಪಾಸಿಟಿವ್ ಕಂಡು ಬಂದಿದೆ. ಇವರು ಜು.4ರಂದು ಸಾವನ್ನಪ್ಪಿದ್ದಾರೆ. ಜು.4 ಬೆಳಗ್ಗೆ ಸಕ್ಕರೆ ಕಾಯಿಲೆಯಿಂದಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಮರಣದ ನಂತರ ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿದೆ. ಜಿಲ್ಲೆಯ ಕೊರೊನಾ ಮಾಹಿತಿ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿದ ವಾಕ್ ಥ್ರೂ ಇಲ್ಲಿದೆ.