ಚಿಕ್ಕಮಗಳೂರಿನಲ್ಲಿ ಹೆಚ್ಚುತ್ತಿರುವ ದನ ಕಳ್ಳತನ ಪ್ರಕರಣಗಳು: ಸಿಸಿಟಿವಿಯಲ್ಲಿ ಕೃತ್ಯ ಸೆರೆ - Cattle Theft
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8819295-162-8819295-1600238621127.jpg)
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಸ್ತೆ ಬದಿಯಲ್ಲಿ ಮಲಗಿರುವ ದನಗಳನ್ನು ಕಳ್ಳತನ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ರಾತ್ರಿಯಾಗುತ್ತಿದ್ದಂತೆಯೇ ಫೀಲ್ಡಿಗೆ ಇಳಿಯುವ ಗೋ ಕಳ್ಳರು ಕಾರಿನಲ್ಲಿ ಬಂದು ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿ ಕಾರಿಗೆ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ. ಶೃಂಗೇರಿ ನಗರದ ಹೊರವಲಯದ ಪೆಟ್ರೋಲ್ ಬಂಕ್ನಲ್ಲಿ ಮಲಗಿದ್ದ ದನಗಳನ್ನು ಸಾಗಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ಮೂಡಿಗೆರೆಯಲ್ಲಿಯೂ ದನಗಳ್ಳತನ ನಡೆಯುತ್ತಿದೆ ಎನ್ನಲಾಗಿದೆ.