ಬಳ್ಳಾರಿ: ಕಿಯಾ ಮೋಟಾರ್ಸ್ ಕಾರ್ ಶೋ ರೂಂಗೆ ಚಾಲನೆ - ಕಿಯಾ ಮೋಟರ್ಸ್ ಕಾರ್ ಶೋ ರೂಂ
🎬 Watch Now: Feature Video
ಬಳ್ಳಾರಿ: ಜಿಲ್ಲೆಯ ಹೊರವಲಯದಲ್ಲಿರುವ ಅಲ್ಲೀಪುರ ಬಳಿ ಕಿಯಾ ಮೋಟಾರ್ಸ್ ಕಾರ್ ಶೋ ರೂಂ ಪ್ರಾರಂಭಿಸಲಾಗಿದೆ. ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹಾಗೂ ಕೊರಿಯಾ ದೇಶದ ಕಿಯಾ ಮೋಟಾರ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಶಿಮ್ ಹಾಗೂ ಫರ್ಕ್ ಅವರು ಕಾರುಗಳ ಕೀ ಅನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಎಂ.ಡಿ. ಶಿಮ್ ಅವರು ನಾನು ಭಾರತ ದೇಶಕ್ಕೆ ಮೊದಲ ಬಾರಿ ಬಂದಿರುವೆ. ಬಳ್ಳಾರಿಯು ಐತಿಹಾಸಿಕ ಹಾಗೂ ಸಂಪದ್ಭರಿತ ನಾಡಾಗಿದ್ದು, ಇಲ್ಲಿ ಶೋ ರೂಂ ಆರಂಭವಾಗಿರುವುದು ಖುಷಿ ತಂದಿದೆ ಎಂದರು.