ಕಪ್ಪೆ ಬೊಂಡಾಸ್ ಮೀನುಗಳ ಅವ್ಯಾಹತ ಬೇಟೆ, ಕಡಲ ಮಕ್ಕಳ ಗೋಳು ಕೇಳೋರಿಲ್ಲವೇ? - ಕಾರವಾರದಲ್ಲಿ ಅಕ್ರಮ ಮೀನುಗಾರಿಕೆ
🎬 Watch Now: Feature Video

ಕಡಲ ಮಕ್ಕಳೆಂದು ಕರೆಸಿಕೊಳ್ಳುವ ಮೀನುಗಾರರ ಬದುಕು ಸರಳವಲ್ಲ. ಹವಾಮಾನ ವೈಪರೀತ್ಯದ ಪರಿಣಾಮ ಗಾಳಿ, ಮಳೆ ಹಾಗೂ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಮೀನುಗಾರರು ಮೀನುಗಾರಿಕೆಗೆ ತೆರಳಲಾಗದೆ ನಷ್ಟ ಅನುಭವಿಸುತ್ತಿದ್ದಾರೆ. ಈ ನಡುವೆ ಹೊರರಾಜ್ಯದ ಮೀನುಗಾರರು ಕಾರವಾರ ಕಡಲತೀರವೊಂದರ ಬಳಿ ನಿಷೇಧಿತ ಮೀನುಗಾರಿಕೆ ನಡೆಸುತ್ತಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.