ಬೈಕ್ ಸೀಟ್ ಕೆಳಗೆ ಅವಿತು ಮಲಗಿದ್ದ ನಾಗಪ್ಪ... ಪ್ರವಾಸಕ್ಕೆ ಬಂದವರಿಗೆ ಶಾಕ್ - ಚಿಕ್ಕಮಗಳೂರು ನಾಗರಹಾವು ನ್ಯೂಸ್
🎬 Watch Now: Feature Video
ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬೈಕ್ನಲ್ಲಿ ಬಂದಿದ್ದ ಪ್ರವಾಸಿಗರ ಬೈಕ್ನಲ್ಲಿ ಬೃಹತ್ ಗಾತ್ರದ ನಾಗರಹಾವು ಸೇರಿಕೊಂಡು ಪ್ರವಾಸಿಗರನ್ನು ಬೆಚ್ಚಿ ಬೀಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಪ್ರವಾಸಿ ತಾಣದಲ್ಲಿ ಕಂಡುಬಂದಿದೆ. ಚಿತ್ರದುರ್ಗದಿಂದ ಆಗಮಿಸಿದ್ದ ಸ್ನೇಹಿತರು, ಬೈಕ್ಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡಿ, ಪ್ರವಾಸಿ ತಾಣ ನೋಡಿಕೊಂಡು ಬರುವಷ್ಟರಲ್ಲಿ ಬೃಹತ್ ಗಾತ್ರದ ನಾಗರಹಾವು ಬೈಕ್ ಸೀಟ್ ಕೆಳಗೆ ಅವಿತು ಮಲಗಿತ್ತು. ಬೈಕ್ ಸ್ಟಾರ್ಟ್ ಮಾಡುವ ವೇಳೆ ಬೈಕ್ನಲ್ಲಿ ಹಾವು ಬುಸುಗುಟ್ಟಿದ ಶಬ್ದ ಕೇಳಿ, ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸ್ನೇಕ್ ಆರೀಫ್ ಅವರಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರು. ಸ್ಥಳಕ್ಕಾಗಮಿಸಿದ ಆರೀಫ್ ಈ ಬೃಹತ್ ಗಾತ್ರದ ನಾಗರ ಹಾವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಬಿಟ್ಟರು.