ಮಿಸೆಸ್ ಕರ್ನಾಟಕ ಫ್ಯಾಷನ್ ಶೋದಲ್ಲಿ ಮಿಂಚಿದ ಮಹಿಳೆಯರು.. ವಿಡಿಯೋ - misses Housewives Fashion Show
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4732481-thumbnail-3x2-bng.jpg)
ಬೆಂಗಳೂರು: ಫ್ಯಾಷನ್ ಶೋ ಎಂದಾಕ್ಷಣ ನಮ್ಮ ನೆನಪಿಗೆ ಬರೋದು ಬಳ್ಳಿಯಂತೆ ಬಳಕುತ್ತಾ ಕ್ಯಾಟ್ ವಾಕ್ ಮಾಡುವ ರೂಪದರ್ಶಿಯರು. ಆದರೆ, ನಾವು ಯಾರಿಗೂ ಕಮ್ಮಿ ಇಲ್ಲವೆಂದು 30ರಿಂದ 45 ವರ್ಷ ವಯಸ್ಸಿನ ಮಹಿಳೆಯರು, ಅಂಗವಿಕಲರು ಫ್ಯಾಷನ್ ಶೋನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಂಗಳೂರು ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ನಡೆದ ಮಿಸೆಸ್ ಕರ್ನಾಟಕ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಧ್ಯ ವಯಸ್ಕ ಮಹಿಳೆಯರೂ ಮಿಂಚಿದರು. ಅಭಯಹಸ್ತ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಬೆಂಗಳೂರು ಸೇರಿ ವಿವಿಧ ಜೆಲ್ಲೆಗಳ 50ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಮಿಸೆಸ್ ಕರ್ನಾಟಕ ಪಟ್ಟಕ್ಕಾಗಿ ತಮ್ಮ ಅಂದ-ಚಂದ ಪ್ರದರ್ಶಿಸಿದರು. ಅಂತಿಮವಾಗಿ ಬೆಂಗಳೂರಿನ ಶಭ್ನಮ್ ಮಿಸೆಸ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡರು.
Last Updated : Oct 14, 2019, 9:07 AM IST