ಮಳೆ ನಿಂತರೂ ಅನಾಹುತಗಳು ನಿಂತಿಲ್ಲ... ಚಾವಣಿ ಕುಸಿವ ಈ ವೀಡಿಯೊ ವೈರಲ್ - ಮನೆಯ ಮೇಲ್ಚಾವಣಿ ಕುಸಿದು
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೇ, ಮಳೆ ನಿಂತರೂ ಅನಾಹುತಗಳು ನಡೆಯುತ್ತಿರುವುದು ಮಾತ್ರ ನಿಂತಿಲ್ಲ. ನೋಡ ನೋಡುತ್ತಿದ್ದಂತೆಯೇ ಮನೆಯ ಚಾವಣಿ ಕುಸಿದು ಬಿದ್ದಿರುವ ದೃಶ್ಯವಂತೂ ನಿಜಕ್ಕೂ ಎದೆಯನ್ನು ನಡುಗಿಸುವಂತಿದೆ. ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಮಳೆಯಿಂದಾಗಿ ನದಿಯಲ್ಲಿ ನೀರು ಹೆಚ್ಚಾಗಿ ಶಿಥಿಲಾವಸ್ಥೆ ತಲುಪಿದ್ದ ಮನೆ ಕುಸಿದು ಬಿದ್ದಿದೆ. ಈ ದೃಶ್ಯವನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮಹಾ ಮಳೆಗೆ ಮಲೆನಾಡು ಭಾಗದ ಬಾಳೆಹೊನ್ನೂರಿನಲ್ಲಿ 112 ಮನೆಗಳು, ಮಾಗುಂಡಿ ಗ್ರಾಮದಲ್ಲಿ 53 ಮನೆಗಳು, ಕಳಸ ಹೋಬಳಿಯಲ್ಲಿ 123 ಮನೆಗಳು ಹಾಳಾಗಿ ವಾಸ ಮಾಡಲೂ ಯೋಗ್ಯವಿಲ್ಲದ ಸ್ಥಿತಿಯನ್ನು ತಲುಪಿವೆ.