ನಿತ್ಯ ಶಿವಪ್ಪನ ಹೊಟ್ಟೆ ತುಂಬಿಸುವ ಸರ್ವರ್‌ ಇಸ್ಲಾಂ.. 'ಮಾನವೀಯತೆ'ಯೇ ಮೇಲು.. ವಿಡಿಯೋ - ಅಂಗವಿಕಲರಿಗೆ ಫ್ರೀ ಊಟ ಕೊಡುವ ಹೋಟೆಲ್​

🎬 Watch Now: Feature Video

thumbnail

By

Published : Jan 23, 2021, 6:43 PM IST

Updated : Jan 23, 2021, 7:25 PM IST

ಮಾನವೀಯತೆಗೆ ಜಾತಿ, ಧರ್ಮ,ಭಾಷೆ, ಗಡಿ,ಬಣ್ಣ ಯಾವುದರ ಹಂಗಿಲ್ಲ ಎಂಬುದಕ್ಕೆ ಬೆಂಗಳೂರಿನಲ್ಲಿನ ಹೋಟೆಲ್​ ಒಂದು ಸಾಕ್ಷಿಯಾಗಿದೆ. 'ಲೇ ಅರೇಬಿಯಾ' ಹೋಟೆಲ್​ ಸರ್ವರ್ ಇಸ್ಲಾಂ ಎಂಬಾತ ಶಿವಪ್ಪ ಎಂಬ ವಿಶೇಷ ಚೇತನರಿಗೆ ಪ್ರತಿದಿನ ತನ್ನ ಕೈ ತುತ್ತು ತಿನ್ನಿಸುತ್ತಾರೆ. ಪಶ್ಚಿಮಬಂಗಾಳ ಮೂಲದವನಾಗಿದ್ರೂ ಯಾವುದೇ ಅಹಂ ಇಲ್ಲದೇ ಅವರಿಗೆ ದಿನ ಕೈ ತುತ್ತು ನೀಡುತ್ತಾನೆ. ಅಲ್ಲದೇ ಹೋಟೆಲ್​ ಮಾಲೀಕರು ಕೂಡ ದಿನವೂ ಈ ಶಿವಪ್ಪನಿಗೆ ಫ್ರೀಯಾಗಿ ಊಟ ನೀಡುತ್ತಾರೆ. ಶಿವಪ್ಪನಿಗಷ್ಟೇ ಅಲ್ಲ, ಈ ಹೋಟೆಲ್​ಗೆ ಬರೋ ಬಡವರು ಹಾಗೂ ಅಂಗವಿಕಲರಿಗೆ ಊಟ ನೀಡಿ ಹಸಿವು ನೀಗಿಸಿ ಕಳಿಸ್ತಾರೆ. ​ಈ ಮೂಲಕ ಈ ಹೋಟೆಲ್​ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ. ಹಸಿದ ಹೊಟ್ಟೆಗೆ ಅನ್ನ ನೀಡುವುದಕ್ಕಿಂತಲೂ ಮಿಗಿಲಾದ ಮನುಷತ್ವ, ಮಾನವೀಯ ಕಾರ್ಯ ಮತ್ತೊಂದುಂಟೆ!
Last Updated : Jan 23, 2021, 7:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.