ಕೊಪ್ಪಳ: ಅಂಜೂರ ಬೆಳೆ ಮೌಲ್ಯವರ್ಧನೆಗೆ ತೋಟಗಾರಿಕಾ ಇಲಾಖೆ ಹೊಸ ಐಡಿಯಾ - ಕೊಪ್ಪಳ ತೋಟಗಾರಿಕಾ ಇಲಾಖೆ ಹೊಸ ಐಡಿಯಾ ಸುದ್ದಿ
🎬 Watch Now: Feature Video
ಕೊಪ್ಪಳ: ರೈತರು ತಾವು ಬೆಳೆದ ಬೆಳೆಗಳನ್ನು ಮೌಲ್ಯವರ್ಧನಗೊಳಿಸಿದರೆ ಉತ್ತಮ ಆದಾಯ ಪಡೆಯಬಹುದು ಎಂಬ ನಿಟ್ಟಿನಲ್ಲಿ ಇಲ್ಲಿನ ತೋಟಗಾರಿಕಾ ಇಲಾಖೆಯ ಫಾರಂ ವೊಂದರಲ್ಲಿ ಬೆಳೆದ ಸಾವಯವ ಅಂಜೂರ ಹಣ್ಣುಗಳನ್ನು ಮೌಲ್ಯವರ್ಧನೆಗೊಳಿಸುತ್ತಿದೆ. ಈ ಫಾರಂಗೆ ವ್ಯಾಪಾರದ ಉದ್ದೇಶ ಇಲ್ಲವಾದರೂ ರೈತರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಈ ಪ್ರಯೋಗ ಮಾಡುತ್ತಿದೆ. ಈ ತೋಟಗಾರಿಕಾ ಫಾರಂ ರೈತರ ಗಮನ ಸೆಳೆಯುತ್ತಿದೆ.