ಗೂಂಡಾಗಿರಿಗೆ ಯಾರು ಹೆದರಬೇಡಿ: ಗೃಹಸಚಿವ ಬೊಮ್ಮಾಯಿ ಅಭಯ - home minister basavaraj bommayi
🎬 Watch Now: Feature Video
ಹಾವೇರಿ: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಕ್ಕೆ ಹಿಡಿದ ಗ್ರಹಣ ದೂರ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದೆ. ಮತದಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಇಲ್ಲಿ ಕೆಲವರು ಬಿಜೆಪಿಯವರಿಗೆ ಬೆದರಿಸುತ್ತಿದ್ದಾರಂತೆ, ನಾನು ಗೃಹಸಚಿವನಾಗಿ ಹೇಳುತ್ತೇನೆ. ನೀವು ಯಾರಿಗೂ ಹೆದರಬೇಕಿಲ್ಲ, ಅಂಜಬೇಕಾಗಿಲ್ಲ. ತಾಕತ್ತಿದ್ದರೆ ಚುನಾವಣೆಯಲ್ಲಿ ಗೆದ್ದು ತೋರಿಸಿ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.