ಬ್ರಿಟಿಷ್ ಗೋರಿಗಳನ್ನು ಕೇಳೋರಿಲ್ಲ, ಅನೈತಿಕ ಚಟುವಟಿಕೆಗಳಿಗೆ ಅಡ್ಡೆಯಾಯ್ತು ಐತಿಹಾಸಿಕ ಕುರುಹುಗಳು! - Bagalkote
🎬 Watch Now: Feature Video

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬ್ರಿಟಿಷರ ಗೋರಿಗಳು ಹಾಳಾಗುತ್ತಿವೆ. ಸರಿಯಾದ ಸಂರಕ್ಷಣೆ ಇಲ್ಲದೆ ಅನೈತಿಕ ಚಟುವಟಿಕೆ ತಾಣವಾಗುತ್ತಿವೆ. ಸುಮಾರು 200 ವರ್ಷಗಳ ಹಿಂದೆ ಕಲಾದಗಿ ಗ್ರಾಮವನ್ನು ಬ್ರಿಟಿಷರು ಜಿಲ್ಲಾ ಕೇಂದ್ರವನ್ನಾಗಿ ಮಾಡಿಕೊಂಡು ಆಡಳಿತ ಮಾಡಿಕೊಂಡಿದ್ದರು ಎಂಬುದಕ್ಕೆ ಈ ಗೋರಿಗಳೇ ಸಾಕ್ಷಿ ಆಗಿವೆ. ಈ ಭಾಗದಲ್ಲಿ 1820 ರಿಂದ 1850 ರವರೆಗೂ ಬ್ರಿಟಿಷರು ಆಡಳಿತ ಮಾಡಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಈ ಸಂದರ್ಭದಲ್ಲಿ ಮೃತ ಪಟ್ಟವರನ್ನು ಕಲಾದಗಿ ಗ್ರಾಮದ ಹೂರ ವಲಯದಲ್ಲಿ ಅಂತ್ಯಕ್ರಿಯೆ ಮಾಡಿ, ಗೋರಿ ಕಟ್ಟಿ, ಅದರ ಮೇಲೆ ಹೆಸರು, ವರ್ಷ ಮತ್ತು ಮೃತ ಪಟ್ಟವರ ವಯಸ್ಸು ನಮೂದಿಸಲಾಗಿದೆ.
TAGGED:
Bagalkote