ಅಥಣಿಯಲ್ಲಿ ಎಡೆ ಬಿಡದೆ ಸುರಿಯುತ್ತಿರು ಮಳೆ: ಹೈರಾಣಾದ ಬದುಕು - ಅಥಣಿ ಮಳೆ ಸುದ್ದಿ
🎬 Watch Now: Feature Video
ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಅಥಣಿ ಭಾಗದ ಜನರಿಗೆ ದಿಕ್ಕು ಕಾಣದೆ ಮನೆಯಲ್ಲೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆದ ಬೆಳೆಗಳು ನೀರು ಪಾಲಾಗುವ ಸನ್ನಿವೇಶ ಎದುರಾಗಿದ್ದು, ರೈತರು ಆತಂಕದಲ್ಲಿದ್ದಾರೆ. ಸುರಿಯುತ್ತಿರುವ ಮಳೆಯಿಂದ ದನಕರುಗಳು ಕಂಗಾಲಾಗಿವೆ. ಕೃಷ್ಣಾ ನದಿ ಕೂಡಾ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ನದಿ ತೀರದ ಗ್ರಾಮಸ್ಥರು ಆತಂಕದಲ್ಲಿ ಕಾಲಕಳೆಯುವಂತಾಗಿದೆ.