ಪ್ರೀತಿಯ ಶಿಕ್ಷಕಿ ವರ್ಗಾವಣೆಯಾಗಿದ್ದಕ್ಕೆ ಕಣ್ಣೀರಿಟ್ಟ ಮಕ್ಕಳು - ವಿಡಿಯೋ - ಮಂಡ್ಯ ಶಿಕ್ಷಕರ ವರ್ಗಾವಣೆ ನ್ಯೂಸ್
🎬 Watch Now: Feature Video
ಮಂಡ್ಯ : ಪ್ರೀತಿಯ ಶಿಕ್ಷಕಿ ವರ್ಗಾವಣೆಯಾಗಿದ್ದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕಣ್ಣೀರಿಟ್ಟು ಬೀಳ್ಕೊಡುಗೆ ನೀಡಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೆಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆಯಿತು. ಮಕ್ಕಳ ಜೊತೆ ಪ್ರೀತಿ- ವಾತ್ಸಲ್ಯದಿಂದ ಇದ್ದ ಸವಿತಾ ಅವರನ್ನು ವರ್ಗಾವಣೆ ಮಾಡಲಾಗಿದೆ. ಶಿಕ್ಷಕಿ ಈ ಶಾಲೆ ಬಿಟ್ಟು ಹೊರಡುವ ವೇಳೆ ಮಕ್ಕಳು ಅವರನ್ನು ಸುತ್ತುವರಿದು ಭಾವುಕರಾದರು.