ವಿಜಯನಗರ ಜಿಲ್ಲೆಯಲ್ಲಿ ಭಾರೀ ಗಾಳಿ: ಅಪಾರ ಪ್ರಮಾಣದ ಮಾವು ಬೆಳೆ ನಾಶ - ವಿಜಯನಗರ ಜಿಲ್ಲೆಯಲ್ಲಿ ಭಾರಿ ಗಾಳಿ ಧರೆಗೆ ಉರುಳಿದ ಮರಗಳು
🎬 Watch Now: Feature Video
ವಿಜಯನಗರ ಜಿಲ್ಲೆಯಲ್ಲಿ ಮಳೆ ಜತೆಗೆ ಗಾಳಿಯ ಆರ್ಭಟ ಜೋರಾಗಿತ್ತು. ನಿನ್ನೆ ರಾತ್ರಿ ಮಳೆಗೆ ಕೂಡ್ಲಿಗಿ ತಾಲೂಕಿನ ಮರಗಳು ಧರೆಗೆ ಉರುಳಿವೆ. ಅಲ್ಲದೆ ಮನೆಗಳ ಛಾವಣಿಗಳು ಹಾರಿ ಹೋಗಿವೆ. ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ರೀತಿಯಲ್ಲಿ ಮಾವು ಬೆಳೆ ನೆಲಕಚ್ಚಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಿನ್ನೆ ತಡರಾತ್ರಿ ಬೀಸಿದ ಭರ್ಜರಿ ಗಾಳಿಯಿಂದಾಗಿ ಈ ಘಟನೆಗಳು ಸಂಭವಿಸಿವೆ.