ಮಂಗಳೂರಿನಲ್ಲಿ ಸದ್ಯಕ್ಕೆ ಮಳೆ ಇಳಿಮುಖ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ - ಮಂಗಳೂರು ಮಳೆ
🎬 Watch Now: Feature Video
ಮಂಗಳೂರು: ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆ ಇಂದು ಕೊಂಚ ಇಳಿಮುಖ ಕಂಡಿದೆ. ಇಂದು ಬೆಳಗ್ಗೆಯಿಂದ ಮಳೆ ಸುರಿಯಲಾರಂಭಿಸಿದರೂ, ಬಿಟ್ಟು ಬಿಟ್ಟು ಬರುತ್ತಿದೆ. ಮೋಡ ಮುಸುಕಿದ ವಾತಾವರಣ ಇದೆ. ಶುಕ್ರವಾರದಂದು ಕುಂಟಿಕಾನ ಬಳಿ ತಡೆಗೋಡೆ ಕುಸಿದಿದ್ದು, ಅದೇ ಸ್ಥಳದಲ್ಲಿ ಶನಿವಾರದಂದು ಮತ್ತಷ್ಟು ಕುಸಿತ ಕಂಡಿದೆ. ಅಲ್ಲದೆ ಅಲ್ಲಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಂದು ಮತ್ತೆ ಮಳೆ ಸುರಿಯುತ್ತಿದ್ದರೂ ಅಬ್ಬರ ಕಡಿಮೆಯಾಗಿದೆ. ಆದರೂ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.