ಮಲೆನಾಡಲ್ಲಿ ಮುಂಗಾರು ಮಳೆಯಬ್ಬರದ್ದೇ ಮಾತು, ಜನ ಹೈರಾಣ: ಪ್ರತ್ಯಕ್ಷ ವರದಿ - ಆಶ್ಲೇಷ ಮಳೆ
🎬 Watch Now: Feature Video
ಶಿವಮೊಗ್ಗ: ಕಳೆದ ನಾಲ್ಕು ದಿನಗಳಿಂದ ಮಲೆನಾಡಿನಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಆಶ್ಲೇಷ ಮಳೆಯಿಂದಾಗಿ ನದಿ- ಹಳ್ಳಗಳನ್ನು ಉಕ್ಕಿ ಹರಿಯುತ್ತಿದ್ದು, ಅನೇಕ ಅನಾಹುತಗಳು ನಡೆದಿವೆ. ತುಂಗಾ ಜಲಾಶಯಕ್ಕೆ ಸದ್ಯ 80 ಸಾವಿರ ಕ್ಯೂಸೆಕ್ ಒಳ ಹರಿವಿದೆ. ಜಲಾಶಯದಿಂದ ಹೊರಹರಿವು ಕೂಡಾ ಅಷ್ಟೇ ಇದೆ. ಕಳೆದ ಮೂರು ದಿನಗಳಿಂದ ಭದ್ರಾ ಜಲಾಶಯಕ್ಕೆ ಪ್ರತಿ ದಿನ 3 ಅಡಿಗಳಷ್ಟು ನೀರು ಹರಿದು ಬರುತ್ತಿದೆ. ಇಲ್ಲಿಗೆ 57 ಸಾವಿರ ಕ್ಯೂಸೆಕ್ ನಷ್ಟು ನೀರಿನ ಒಳಹರಿವಿದೆ. ಇಲ್ಲಿನ ಎರಡು ನಾಲೆಗಳಿಗೆ 2.189 ಕ್ಯೂಸೆಕ್ ನಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 72 ಸಾವಿರ ಕ್ಯೊಸೆಕ್ ನೀರಿನ ಒಳ ಹರಿವಿದೆ.