ಭಾರಿ ಮಳೆ: ಕೊಳವೆ ಬಾವಿಯಿಂದ ದಿಢೀರ್ ಉಕ್ಕುತ್ತಿದೆ ಜೀವಜಲ.. - ಕೊಳವೆ ಬಾವಿಯಿಂದ ಉಕ್ಕುತ್ತಿರುವ ನೀರು
🎬 Watch Now: Feature Video

ಕಳೆದ ಶನಿವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಚನೂರು ಮಲ್ಲಯ್ಯ ದೇವಸ್ಥಾನದ ಕೊಳವೆಬಾವಿಯಲ್ಲಿ ದಿಢೀರ್ ಆಗಿ ನೀರು ಉಕ್ಕಿ ಹರಿಯುತ್ತಿದೆ. ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಹನುಮನಾಳ ಹೋಬಳಿ ವ್ಯಾಪ್ತಿಯ ನಿಲೋಗಲ್ ಸಮೀಪದ ಅಚನೂರು ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕುಡಿಯುವ ನೀರಿಗಾಗಿ ಹಾಕಿಸಿದ ಕೊಳವೆ ಬಾವಿಯಲ್ಲಿ ನೀರು ತನ್ನಿಂದ ತಾನೆ ಉಕ್ಕುತ್ತಿದೆ. ಈ ಪ್ರದೇಶದಲ್ಲಿ ವ್ಯಾಪಕ ಮಳೆಯಿಂದ ಅಂತರ್ಜಲ ವೃದ್ಧಿಯಾಗಿದ್ದು, ಸಬ್ಮರ್ಸಿಬಲ್ ಪಂಪ್ ಚಾಲನೆ ಇಲ್ಲದೇ ಉಕ್ಕುತ್ತಿರುವುದು ಅಚ್ಚರಿ ಮೂಡಿಸಿದೆ.