ಕೆ ಆರ್ ಪುರದಲ್ಲಿ ಮಳೆ ಅವಾಂತರ... ಕೆರೆಯಂತಾದ ರಸ್ತೆಗಳು, ಜನರ ಪರದಾಟ - bangalore latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-8734764-thumbnail-3x2-bngg.jpg)
ನಿನ್ನೆ ರಾತ್ರಿ ನಗರದಲ್ಲಿ ಗುಡುಗು ಸಹಿತ ಭರ್ಜರಿ ಮಳೆ ಸುರಿದ ಪರಿಣಾಮ ಅವಾಂತರ ಸೃಷ್ಟಿಯಾಗಿದೆ. ಕೆ ಆರ್ ಪುರದ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ಪ್ರಮುಖ ರಸ್ತೆಗಳು ಕೆರೆಯಂತಾಗಿವೆ. ರಾಮಮೂರ್ತಿ ನಗರ, ವಡ್ಡರ ಪಾಳ್ಯ, ಹೊರಮಾವು, ಸಾಯಿ ಬಡಾವಣೆ, ಕೆ.ಆರ್ ಪುರಂ, ಮಹಾದೇವಪುರ, ಕಾವೇರಿನಗರ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಅಲ್ಲಲ್ಲಿ ನೀರು ನಿಂತ ಪರಿಣಾಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ.