ಧಾರವಾಡದಲ್ಲಿ ವರುಣನ ಅಬ್ಬರ: ಮನೆಗಳಿಗೆ ನುಗ್ಗಿದ ನೀರು, ಕೊಚ್ಚಿ ಹೋದ ಬೈಕ್ಗಳು - ಮಳೆಗೆ ಕೊಚ್ಚಿ ಹೋದ ಬೈಲ್
🎬 Watch Now: Feature Video
ವಾಯುಭಾರ ಕುಸಿತದಿಂದಾಗಿ ಧಾರವಾಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಇಲ್ಲಿನ ರಸ್ತೆಗಳು ನೀರಿನಿಂದ ಆವೃತವಾಗಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿವೆ. ಬಿಆರ್ಟಿಎಸ್ ಕಾರಿಡಾರಿಂದ ಏಕಾಏಕಿ ಹರಿದು ಬಂದ ಮಳೆ ನೀರಿನಲ್ಲಿ ಮನೆಮುಂದೆ ನಿಲ್ಲಿಸಿದ್ದ ಬೈಕ್ಗಳು ತೇಲಿಕೊಂಡು ಹೋಗಿವೆ. ಇಷ್ಟೇ ಅಲ್ಲದೇ, 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಮಾಹಿತಿ ದೊರೆತಿದೆ.