ಮತ್ತೆ ಶುರುವಾಯ್ತು ವರುಣದೇವನ ಅಬ್ಬರ: ಧಾರವಾಡದಲ್ಲಿ ಗುಡುಗು ಸಹಿತ ಮಳೆ - rain in dharwad now
🎬 Watch Now: Feature Video
ಧಾರವಾಡ: ಕಳೆದ ನಾಲ್ಕೈದು ದಿನಗಳಿಂದ ತಣ್ಣಗಾಗಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿದ್ದಾನೆ. ಸತತ ಅರ್ಧಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ನಗರದಲ್ಲಿ ಮಳೆ ಸುರಿದಿದ್ದು ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಏಕಾಏಕಿ ಆರಂಭವಾದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಅಬ್ಬರದ ಮಳೆಯಿಂದ ಹಲವೆಡೆ ಬೆಳೆ ಸೇರಿದಂತೆ ಭಾರಿ ಹಾನಿ ಸಂಭವಿಸಿದೆ.