ಬೆಳಗಾವಿಯಲ್ಲಿ ಮಳೆಗೆ ರಸ್ತೆ ಜಲಾವೃತ: ಸಂಚಾರ ಅಸ್ತವ್ಯಸ್ತ... - belagavi rain news
🎬 Watch Now: Feature Video

ಬೆಳಗಾವಿ: ನಗರದಲ್ಲಿ ಏಕಾಏಕಿ ಸುರಿದ ಮಳೆರಾಯನ ಆರ್ಭಟಕ್ಕೆ ಇಲ್ಲಿನ ಕೊಲ್ಲಾಪುರ ಸರ್ಕಲ್ ರಸ್ತೆ, ಶಿವಬಸವನಗರ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಜಲಾವೃತವಾದ ಹಿನ್ನೆಲೆ ಬೈಕ್ ಹಾಗೂ ವಾಹನ ಸವಾರರು ರಸ್ತೆ ಸಂಚಾರ ಮಾಡಲು ಹರಸಾಹಸಪಟ್ಟರು. ಇಂದು 1 ಘಂಟೆಗೂ ಅಧಿಕ ಕಾಲ ಸುರಿದ ಭಾರಿ ಮಳೆಗೆ ಕೆಲ ರಸ್ತೆಗಳು ನೀರಿನಲ್ಲಿ ಮುಳುಗಿರುವ ಪರಿಣಾಮ ವಾಹನ ಸಂಚಾರ ಸೇರಿದಂತೆ ಜಿಲ್ಲೆಯ ಜನರ ಜೀವನ ಅಸ್ತವ್ಯಸ್ತತವಾಗಿದೆ. ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿಯಿಂದಾಗಿ ನಗರದಲ್ಲಿ ಬಹುತೇಕ ಕಡೆ ಸಿಮೆಂಟ್ ರಸ್ತೆಯ ಕಾಮಗಾರಿಗಳು ನಡೆಯುತ್ತಿವೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹೋಗದ ಪರಿಣಾಮ ಚರಂಡಿ ತ್ಯಾಜ್ಯ ಸೇರಿದಂತೆ ಹೊಲಸು ನೀರು ರಸ್ತೆಯನ್ನು ಆವರಿಸಿಕೊಂಡಿದೆ. ಇದಲ್ಲದೇ ಏಕಾಏಕಿ ಮಳೆಗೆ ಬೀದಿ ಬದಿಯ ವ್ಯಾಪರಕ್ಕೆ ಮಳೆ ಅಡ್ಡಿಯಾಗಿದೆ.