ಅಥಣಿ ತಾಲೂಕಲ್ಲಿ ಭಾರೀ ಮಳೆ: ಅಪಾರ ಪ್ರಮಾಣದ ಬೆಳೆ ನೀರುಪಾಲು - ಭಾರೀ ಮಳೆ: ಬೆಳೆಗಳು ಜಲಾವೃತ
🎬 Watch Now: Feature Video
ಅಥಣಿ ತಾಲೂಕಿನ ಕೆಲವು ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ ಕೊಟ್ಟಲಗಿ, ಕಕಮರಿ, ಅಥಣಿ ಪೂರ್ವ ಭಾಗದಲ್ಲಿ ಗರಿಷ್ಠ ಮಟ್ಟ ಮೀರಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು, ಅಪಾರ ಪ್ರಮಾಣದ ಬೆಳೆಗಳು ಜಲಾವೃತಗೊಂಡಿದೆ. ಹಲವಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಹವಾಮಾನ ವೈಪರೀತ್ಯದಿಂದ ದ್ರಾಕ್ಷಿ ಬೆಳೆಗಾರರು ಕಂಗಾಲಾಗಿದ್ದು, ಮಳೆಯಿಂದ ದ್ರಾಕ್ಷಿ ತೋಟಗಳು ಕೂಡ ಜಲಾವೃತವಾಗಿವೆ.