ದಾವಣಗೆರೆಯಲ್ಲಿ ವರುಣನ ಆರ್ಭಟ: ಜನಜೀವನ ಅಸ್ತವ್ಯಸ್ತ - ದಾವಣಗೆರೆಯಲ್ಲಿ ವರುಣನ ಆರ್ಭಟ
🎬 Watch Now: Feature Video

ದಾವಣಗೆರೆ: ವರುಣನ ಆರ್ಭಟ ದಾವಣಗೆರೆಯ ಸುತ್ತಮುತ್ತ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ಸಂಜೆಯಿಂದ ಬಿಡದೇ ಸುರಿದ ಮಳೆಗೆ ದಾವಣಗೆರೆ, ಹೊನ್ನಾಳಿ ಸೇರಿದಂತೆ ಶಾಮನೂರು, ಕುಂದುವಾಡದಲ್ಲಿ ನೂರಾರು ಮನೆಗಳಿಗೆ ನೀರು ನುಗ್ಗಿದೆ. ಇನ್ನು ಶಾಮನೂರು ಜಯದೇವಪ್ಪ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದು, ಮದುವೆಗೆ ಬಂದ ಜನರು ಪರದಾಡುವಂತಾಯಿತು. ಇನ್ನು ರಸ್ತೆ ತುಂಬಾ ನೀರು ನಿಂತು ವಾಹನ ಸವಾರರಿಗೆ ರಸ್ತೆ ಕಾಣದೇ ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು. ಇತ್ತ ಹೊನ್ನಾಳಿಯಲ್ಲಿಯೂ ಸತತ ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಖಾಸಗಿ ಬಸ್ ನಿಲ್ದಾಣ ಜಲಾವೃತವಾಗಿದೆ.