ಮಣ್ಣಲ್ಲಿ ಮಣ್ಣಾದ 'ಹಾವೇರಿ ಡಾನ್': ಶರವೇಗದ ಹೋರಿ ಸಾವಿಗೆ ಸಾವಿರಾರು ಅಭಿಮಾನಿಗಳ ಕಂಬನಿ - ಮಿಂಚಿನ ಓಟ ನಿಲ್ಲಿಸಿದ 'ಹಾವೇರಿ ಡಾನ್
🎬 Watch Now: Feature Video
'ಹಾವೇರಿ ಡಾನ್' ಈ ಹೆಸರು ಹೇಳಿದರೆ ಸಾಕು, ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಎಲ್ಲಾರು ತುದಿಗಾಲ ಮೇಲೆ ನಿಂತು ಈತನನ್ನು ನೋಡುತ್ತಿದ್ದರು. 15 ವರ್ಷಗಳ ಕಾಲ 'ಹಾವೇರಿ ಡಾನ್' ರಾಜ್ಯ ಮಾತ್ರವಲ್ಲದೆ ಅಂತಾರಾಜ್ಯದಲ್ಲೂ ತನ್ನದೇ ಆದ ಛಾಪು ಮೂಡಿಸಿತ್ತು. ಹೋದಲ್ಲೆಲ್ಲ ಹಾವೇರಿ ಡಾನ್ದೇ ಜಯ ಎಂದು ಜನರೆಲ್ಲಾ ಮಾತನಾಡಿಕೊಳ್ಳುತ್ತಿದ್ದರು. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ, 'ಹಾವೇರಿ ಡಾನ್' ಹೋರಿ ಕೊನೆಯುಸಿರೆಳೆದಿದೆ. ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಹೋರಿ ಜನಮಾನಸದಲ್ಲಿ ಮಾತ್ರ ಉಳಿದಿದೆ..