ಸುಡುಗಾಡು ಸಿದ್ದರ ಕುಟುಂಬಗಳಿಗೆ ಶಾಶ್ವತ ಸೂರಿಲ್ಲ; ಇವರ ಪಾಡು ಕೇಳುವವರೇ ಇಲ್ಲ - sudugadu sidda families
🎬 Watch Now: Feature Video
ಹಾವೇರಿ: ನಗರದ ಹೊರವಲಯದಲ್ಲಿರುವ ಸುಡುಗಾಡು ಸಿದ್ದರ ಕುಟುಂಬಗಳು ಇದೀಗ ಅಕ್ಷರಶಃ ಬೀದಿಗೆ ಬಂದಿವೆ. 2019ರಲ್ಲಿ ನೆರೆಗೆ ನಲುಗಿದ್ದ ಈ ಕುಟುಂಬಗಳಿಗೆ ಶಾಶ್ವತ ಮನೆಕಟ್ಟಿಸುವ ಭರವಸೆ ನೀಡಲಾಗಿತ್ತು. ಮನೆ ನಿರ್ಮಾಣವಾಗುವವರೆಗೆ ಶಾಂತಿನಗರದಲ್ಲಿ ಜಮೀನಿನಲ್ಲಿ ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಲಾಗಿತ್ತು. ಆದರೆ ನೆರೆ ಬಂದು ಎರಡು ವರ್ಷವಾಗುತ್ತಾ ಬಂದರೂ ಸರ್ಕಾರ ಇವರಿಗೆ ಶಾಶ್ವತ ಸೂರು ಒದಗಿಸಿಲ್ಲ. ತಗಡಿನ ಶೆಡ್‌ಗಳು ಗಾಳಿ ಮಳೆಗೆ ಹಾರಿಹೋಗಿದ್ದು, ಈ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಕುರಿತ ಒಂದು ವರದಿ..