ಅನಾವಶ್ಯಕವಾಗಿ ಓಡಾಟ : ಬಿಸಿಲಿನಲ್ಲಿ ಬಸ್ಕಿ ಹೊಡೆಸಿ ಬಿಸಿ ಮುಟ್ಟಿಸಿದ ಪೊಲೀಸರು - ಬಿಸಿಲಿನಲ್ಲಿ ಬಸ್ಕಿ ಹೊಡೆಸಿ ಬಿಸಿ ಮುಟ್ಟಿಸಿದ ಪೊಲೀಸರು
🎬 Watch Now: Feature Video
ಹಾವೇರಿ : ಲಾಕ್ಡೌನ್ ಹಿನ್ನೆಲೆ ವಿನಾಕಾರಣ ಬೈಕ್ ನಲ್ಲಿ ಓಡಾಡುವ ಸವಾರರಿಗೆ ಹಲವು ರೀತಿಯಲ್ಲಿ ಪೊಲೀಸರು ಬುದ್ದಿ ಹೇಳುತ್ತಿದ್ದಾರೆ. ಆದರು ಸಹ ವಿನಾಕಾರಣ ಬೈಕ್‌ಗಳಲ್ಲಿ ಓಡಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಬೇಸತ್ತ ಹಾವೇರಿ ಜಿಲ್ಲೆ ಸವಣೂರ ತಾಲೂಕಿನ ಯಲವಿಗೆ ಪೊಲೀಸರು ಬಿಸಿಲಿನಲ್ಲಿ ಬಸ್ಕಿ ಹೊಡೆಸಿದ್ದಾರೆ. ಅದು ಒಂದೆರಡಲ್ಲಾ 50 ಬಸ್ಕಿ ಹೊಡೆಸಿ ಬುದ್ದಿವಾದ ಹೇಳಿದ್ದಾರೆ. ಇನ್ನೊಮ್ಮೆ ಹೊರಗೆ ಬಂದರೆ 50 ಕ್ಕಿಂತ ಹೆಚ್ಚು ಬಸ್ಕಿ ಹೊಡೆಸುವ ಎಚ್ಚರಿಕೆ ನೀಡಿದ್ದಾರೆ.